ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ

(ನ್ಯೂಸ್ ಕಡಬ) newskadaba.com ಬಳ್ಳಾರಿ ,ಜು.16:  ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು(81) ವಿಧಿವಶರಾಗಿದ್ದಾರೆ. ಸ್ವಗ್ರಾಮ ಬಳ್ಳಾರಿಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.

 

ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ಕಳೆದವರು. ತಮ್ಮ 27ನೇ ವಯಸ್ಸಿಗೆ ರಂಗಪ್ರವೇಶಿಸಿದ್ದ ಇವರು, ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ ಪಾತ್ರಗಳ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿದ್ದ ಕಲಾವಿದೆ. ಬಳ್ಳಾರಿ ಸುಭದ್ರಮ್ಮ ಅಂತಲೇ ಖ್ಯಾತಿ ಗಳಿಸಿದ್ದ ರಂಗಕರ್ಮಿ. ಎರಡು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದ ಸುಭದ್ರಮ್ಮನವರು. ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಹಂಪಿ ವಿವಿ ಕೊಡಮಾಡುವ ನಾಡೋಜ ಪುರಸ್ಕೃತೆ‌ ರಂಗಕರ್ಮಿ ಸುಭದ್ರಮ್ಮಗೆ 81 ವರ್ಷ ವಯಸ್ಸಾಗಿತ್ತು.

Also Read  ವಿಹಿಂಪ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ದ ಸುಳ್ಳಾರೋಪ ➤ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ

 

 

error: Content is protected !!
Scroll to Top