ಅಂಗವೈಕಲ್ಯವನ್ನು ಮೆಟ್ಟಿನಿಂತ ಎಂಡೋಪೀಡಿತ ವಿದ್ಯಾರ್ಥಿ ➤ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

(ನ್ಯೂಸ್ ಕಡಬ) newskadaba.com ಕಡಬ ,ಜು.15: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ವಿದ್ಯಾರ್ಥಿಯೋರ್ವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂಡೋಸಲ್ಪಾನ್ ನಿಂದ ತನಗಾದ ಅಂಗವೈಕಲ್ಯವನ್ನೂ ಮೆಟ್ಟಿನಿಂತು ಉತ್ತಮ ಸಾಧನೆ ಮಾಡಿದ್ದಾರೆ.

ಶೇ. 85 ರಷ್ಟು ಎಂಡೋ ಪೀಡಿತರಾಗಿರುವ ವಿದ್ಯಾರ್ಥಿ ಮನೋಜ್ ಕುಮಾರ್ ಮಂಗಳೂರಿನ ಸೇವಾಭಾರತಿ ¸ನಡೆಸುತ್ತಿರುವ ಕಾಜರುಕುಕ್ಕು ವಿದ್ಯಾಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಪಿಯುಸಿ ಪರೀಕ್ಷೆಗೆ ತರಬೇತಿ ಪಡೆದು ಕಲಾ ವಿಭಾಗದಲ್ಲಿ 360 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮನೋಜ್ ಕುಮಾರ್ ಕಿವಿ. ಕೈ ಎಲುಬು ಸಮಸ್ಯೆಯಿಮದ ಬಳಲುತ್ತಿದ್ದು, ನಾಲ್ಕು ಬಾರಿ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ಆದರೆ, ತನ್ನ ಎಲ್ಲಾ ನೋವುಗಳನ್ನ ಬದಿಗೊತ್ತಿ ಸಾಧನೆಯೆಮಬ ಶಿಖರವನ್ನು ಏರಿದ್ದಾರೆ ಮನೋಜ್ ಕುಮಾರ್.

error: Content is protected !!
Scroll to Top