ಉಡುಪಿ : ಇಂದು ರಾತ್ರಿಯಿಂದ ಉಡುಪಿ ಜಿಲ್ಲೆಯ ಗಡಿಗಳು 14ದಿನಗಳ ಕಾಲ ಸೀಲ್‌ಡೌನ್

(ನ್ಯೂಸ್ ಕಡಬ) newskadaba.com ಉಡುಪಿ,ಜು.15: ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲೆಗಳು ಲಾಕ್‌ಡೌನ್ ಮೊರೆ ಹೋಗಿದ್ದರೆ, ಉಡುಪಿ ಜಿಲ್ಲೆ ಮಾತ್ರ ವಿಭಿನ್ನವಾಗಿ ಗಡಿಗಳನ್ನು ಸೀಲ್ ಮಾಡಲು ಮುಂದಾಗಿದೆ. ಹೀಗಾಗಿ ಜುಲೈ 15ರ ರಾತ್ರಿ 8 ಗಂಟೆಯಿಂದ ಉಡುಪಿ ಜಿಲ್ಲೆಗೆ ಯಾರು ಬರುವಂತಿಲ್ಲ ಉಡುಪಿ ಜಿಲ್ಲೆಯಿಂದ ಯಾರು ಹೊರಹೋಗುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶಿಸಿದೆ. ಜಿಲ್ಲೆಯ ತಜ್ಞ ಆರೋಗ್ಯಾಧಿಕಾರಿಗಳ ಜೊತೆಗೆ ಮಂಗಳವಾರ ಮಹತ್ವದ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಬುಧವಾರ ರಾತ್ರಿ 8 ಗಂಟೆಯಿಂದ 14 ದಿನಗಳ ಕಾಲ ಜಿಲ್ಲೆಯ ಗಡಿ ಅನ್ಯ ಜಿಲ್ಲೆಯ ನಿವಾಸಿಗಳಿಗೆ ಬಂದ್ ಆಗಿರುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಗೂ ಚಿಕ್ಕಮಗಳೂರು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ಉಡುಪಿಯು ಅನ್ಯ ಜಿಲ್ಲೆಯವರ ಪ್ರವೇಶವನ್ನು ನಿಷೇಧಿಸಿದೆ.

Also Read  ಹಬ್ಬಗಳ ಹಿನ್ನೆಲೆ ಕಡಬ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

 

ಲಾಕ್‌ಡೌನ್‌ಗಿಂತಲೂ ಗಡಿಗಳನ್ನು ಸೀಲ್ ಮಾಡುವುದು ಹೆಚ್ವು ಪರಿಣಾಮಕಾರಿ ಎಂಬುದು ಉಡುಪಿ ಜಿಲ್ಲಾಡಳಿತದ ಅಭಿಪ್ರಾಯವಾಗಿದೆ. ಸದ್ಯ ಉಡುಪಿ ಜಿಲ್ಲೆಗೆ ಹೊರಜಿಲ್ಲೆಗಳಿಂದ ಬರುವವರೇ ಅಪಾಯ ತಂದೊಡ್ಡುತ್ತಿದ್ದಾರೆ. ಅವರಿಂದಲೇ ಜಿಲ್ಲೆಯಲ್ಲಿ ಕೊರೋನಾ ಹಬ್ಬುತ್ತಿರುವುದು ದೃಢವಾಗಿದೆ. ಹೀಗಾಗಿ ಹೊರಗಿನವರ ಸಂಚಾರ ನಿರ್ಬಂಧಿಸಿದರೆ ಸೋಂಕು ನಿಯಂತ್ರಣ ಸಾಧ್ಯ ಎಂಬುದು ಜಿಲ್ಲಾಡಳಿತದ ವಾದ.

 

ಗಡಿ ಸೀಲ್‌ಡೌನ್ ನಂತರ‌ ಜಿಲ್ಲೆಯೊಳಗೆ ಏನಿರುತ್ತೆ ಏನಿರಲ್ಲ?
1. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿರುತ್ತವೆ.
2. ಖಾಸಗಿ ವಾಹನ ಸಂಚಾರ ಸಹಜವಾಗಿರುತ್ತದೆ.
3. ಸಾರ್ವಜನಿಕ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ
4. ವಾರದ ಸಂತೆ ನಡೆಸುವಂತಿಲ್ಲ.
5. ಧಾರ್ಮಿಕ ಕೇಂದ್ರಗಳಲ್ಲಿ ಅರ್ಚಕರು ಭಕ್ತರು ಸೇರಿದಂತೆ 20 ಜನರಿಗೆ ಮಾತ್ರ ಅವಕಾಶ

Also Read  ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕನೋರ್ವ ಮೃತ್ಯು

error: Content is protected !!
Scroll to Top