ದ. ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯಿಂದಲೇ ಲಾಕ್ ಡೌನ್ ➤ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಲಾಕ್‌ಡೌನ್ ನಿರ್ಧಾರವನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಜಿಲ್ಲೆಯ ಜನಪ್ರತಿನಿಧಿಗಳ, ಅಧಿಕಾರಿಗಳ ಅಭಿಪ್ರಾಯ ಪಡೆದು ಒಂದು ವಾರಗಳ ಲಾಕ್‌ಡೌನ್ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಇಂದು ರಾತ್ರಿ ಎಂಟು ಗಂಟೆಯಿಂದ ಮುಂದಿನ ಜುಲೈ 23ರ ಬೆಳಗ್ಗೆ 5 ಗಂಟೆವರೆಗೂ ಜಿಲ್ಲೆಯಲ್ಲಿ ಲಾಕ್‌ಡೌನ್ ಇರಲಿದೆ. ನಿನ್ನೆ ಮತ್ತು ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಹೆಚ್ಚು ಸೋಂಕಿತರು ಕಂಡು ಬಂದಿರುವುದರಿಂದ ಲಾಕ್‌ಡೌನ್ ನಿಯಮ ಉಲ್ಲಂಘಿಸದಂತೆ ಹದ್ದಿನಕಣ್ಣಿಡುವ ನಿರ್ಧಾರ ಮಾಡಲಾಗಿದೆ. ಲಾಕ್‌ಡೌನ್ ಪಾಲನೆಗೆ ಜಿಲ್ಲಾಡಳಿತ ಈಗಾಗಲೇ ಗೈಡ್‌ಲೈನ್ಸ್ ಅನ್ನು ರೆಡಿ ಮಾಡಿದೆ.

Also Read  ಜಿಯಾ ಖಾನ್ ಆತ್ಮಹತ್ಯೆ ಪ್ರಕರಣ       ➤ ನಟ ಸೂರಜ್ ಪಾಂಚೋಲಿ ಖುಲಾಸೆಗೊಳಿಸಿದ ಕೋರ್ಟ್..!

 

ಲಾಕ್ ಡೌನ್ ವೇಳೆ ಜಿಲ್ಲೆಯಲ್ಲಿ ಏನಿರಲಿದೆ?

ಹಾಲು, ತರಕಾರಿ, ಮೊಟ್ಟೆ, ದಿನಸಿ ವಸ್ತುಗಳು, ಮಾಂಸ ಲಭ್ಯ, ತುರ್ತು ಆರೋಗ್ಯ ಸೇವೆಗಳು ಲಭ್ಯ, ಹೊಟೇಲ್​ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಲಭ್ಯ, ಅಗತ್ಯ ಸರ್ಕಾರಿ ಕಚೇರಿಗಳು ಹಾಗೂ ಕೃಷಿ ಸಂಬಂಧಿತ ಕಚೇರಿಗಳು ತೆರೆದಿರುತ್ತವೆ.

 

ಲಾಕ್ ಡೌನ್ ವೇಳೆ ಏನಿರಲ್ಲ ?

ಅನಗತ್ಯ ಓಡಾಟ, ಬಾರ್, ವೈನ್ ಶಾಪ್, ಹೊಟೇಲ್ ಸೇವೆ, ಖಾಸಗಿ ವಾಹನ ಸಂಚಾರ, ಬ್ಯಾಂಕ್ ಸೇವೆ, ಸಾರ್ವಜನಿಕ ಸಾರಿಗೆ, ಮಾಲ್, ಉದ್ಯಾನವನ, ದೇವಸ್ಥಾನ, ಮಸೀದಿ, ಚರ್ಚ್, ಕ್ರೀಡೆ, ಸಣ್ಣ ಕೈಗಾರಿಕೆಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡ ಕಾಯಿದೆಯ ಅನುಸಾರ ಐಪಿಸಿ ಸೆಕ್ಷನ್ 56 ರಿಂದ 60, ಐಪಿಸಿ ಸೆಕ್ಷನ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶಿಸಿದ್ದಾರೆ.

Also Read  ಮಂಗಳೂರು: ಸೈನಿಕರ ಹೆಸರಿನಲ್ಲಿ ವಾಹನ ಮಾರಾಟ ವಂಚನೆ ಜಾಲ ➤ ಎಚ್ಚರ ವಹಿಸುವಂತೆ ಸಲಹೆ

 

 

error: Content is protected !!
Scroll to Top