ಕಾಸರಗೋಡು: ಅಕ್ರಮ ಮದ್ಯ ಸಾಗಾಟ ,ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು,ಜು.14: ಕಾರಿನಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೀಯಪದವು ನಿವಾಸಿ 28 ವರ್ಷದ ಕೂಳೂರಿನ ನವೀನ್ ಶೆಟ್ಟಿ ಎಂದು ಗುರುತಿಸಲಾಗಿದೆ.

 

ಇನ್ನು, ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಅಂಗಡಿಮೊಗರು ಸೇತುವೆಯಲ್ಲಿ ಇನ್ನೋವಾಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.  ಕಾರಿನಲ್ಲಿ 51 ಬಾಕ್ಸ್ ಗಳಲ್ಲಿ 2668 ಬಾಟಲ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಕರ್ನಾಟಕದಿಂದ ಅಕ್ರಮ ಮದ್ಯ ತಂದು ದಾಸ್ತಾನಿಟ್ಟು ವಿವಿದೆಡೆಗೆ ಪೂರೈಕೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಬೆಂಕಿ ಅವಘಡ ಮನೆಯಲ್ಲಿ ಮಹಿಳೆ ಸಜೀವ ದಹನ

 

 

error: Content is protected !!
Scroll to Top