ಮಂಗಳೂರು : ತಡರಾತ್ರಿ ತಲವಾರ್ ಹಿಡಿದು ದಾಂಧಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.14: ತಲವಾರು ಹಿಡಿದ ಯುವಕರ ತಂಡ ಇನ್ನೊಂದು ಕೋಮಿನ ಮನೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ‌. ಮಂಗಳೂರು  ತಡರಾತ್ರಿ ಮಂಗಳೂರು ನಗರದ ಬಜಿಲಕೇರಿ ಎಂಬಲ್ಲಿ ಘಟನೆ ನಡೆದಿದ್ದು ಎರಡು ಕಾರಿನಲ್ಲಿ ಬಂದಿದ್ದ ಆರೇಳು ಮಂದಿ ಗಾಂಜಾ ವ್ಯಸನಿಗಳು ಕೃತ್ಯ ಎಸಗಿದ್ದಾರೆ. ಅಜಯ್ ಎಂಬಾತನ ಮನೆಗೆ ನುಗ್ಗಿದ ಯುವಕರ ತಂಡ  ದಾಂಧಲೆ ಮಾಡಿದೆ. ಈ ವೇಳೆ, ಅಜಯ್ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಆಗಮಿಸಿ ಸ್ಥಳದಲ್ಲಿ ಸೇರಿದ್ದ ಎರಡೂ ತಂಡಗಳ ಯುವಕರನ್ನು ಹಿಂದಕ್ಕೆ ಹೋಗುವಂತೆ ಮನವೊಲಿಸಿದ್ದಾರೆ.

 

ಆದರೆ, ತಡರಾತ್ರಿ ಮತ್ತೆ ಬಜಿಲಕೇರಿ ಪ್ರದೇಶಕ್ಕೆ ಆಗಮಿಸಿದ್ದ ಯುವಕರು ತಲವಾರು ಬೀಸುತ್ತಾ ಆವಾಜ್ ಹಾಕಿದ್ದಾರೆ. ಪೊಲೀಸರನ್ನೂ ಲೆಕ್ಕಿಸದೆ ಯುವಕನೊಬ್ಬ ತಲವಾರು ಬೀಸುತ್ತಾ ಸಾಗಿದ್ದಾನೆ. ಈ ಘಟನೆ ಬಂದರು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ನಡೆದಿದೆ‌. ಕೊನೆಗೆ ಮತ್ತಷ್ಟು ಪೊಲೀಸ್ ಸಿಬಂದಿ ಬಂದಿದ್ದು ಐವರು ಯುವಕರನ್ನು ಬಂಧಿಸಿದ್ದಾರೆ.ಹಳೆ ದ್ವೇಷ ತೀರಿಸಲು ಗಾಂಜಾ ಸೇವಿಸಿಕೊಂಡು ಯುವಕರು ಆಗಮಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Also Read  ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲನಿಯ ಮುತ್ತುಮಾರಿಯಮ್ಮ ದೇವಸ್ಥಾನದ 41ನೇ ವರ್ಷದ ವರ್ಷಾವಧಿ ಜಾತ್ರೋತ್ಸವ

 

error: Content is protected !!
Scroll to Top