ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೂ ಪ್ರವೇಶಿಸಿದ ಸೋಂಕು ➤ ಎಸ್ಐ, ಓರ್ವ ಕಾನ್ಸ್‌ಟೇಬಲ್‌ಗೆ ಪಾಸಿಟಿವ್

(ನ್ಯೂಸ್ ಕಡಬ) newskadaba.com ಪುತ್ತೂರು,ಜು.13: ಪುತ್ತೂರು ಮಹಿಳಾ ಪೋಲೀಸ್ ಠಾಣೆಗೆ ಮತ್ತೆ ಕೊರೋನಾ ವಕ್ಕರಿಸಿದೆ. ಈ ಹಿಂದೆ ವಿಟ್ಲ ಪೋಲೀಸ್ ಕಾನ್ಸ್‌ಟೇಬಲ್ ಸಂಪರ್ಕ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಕೆಲವರನ್ನು ಕ್ವಾರೈಂಟೈನ್ ಗೆ ಒಳಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಠಾಣೆಯ ಯಾವೊಬ್ಬ ಸಿಬ್ಬಂದಿಯಲ್ಲೂ ಕೊರೋನಾ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಆದರೆ ಈ ಬಾರಿ ಠಾಣೆಯ ಎಸ್‌ಐ ಮತ್ತು ಕಾನ್ಸ್‌ಟೇಬಲ್‌ ಓರ್ವರಿಗೆ ಕೊರೋನಾ ದೃಢಪಟ್ಟಿದೆ.

 

ಪುತ್ತೂರು ನಗರ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್‌ನಲ್ಲಿ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳಾ ಪೋಲೀಸ್ ಠಾಣೆಯ ಎಸ್‌ಐ ಸೇರಿದಂತೆ ಇಬ್ಬರು ಮಹಿಳಾ ಪೋಲೀಸರನ್ನು ಕ್ವಾರೈಂಟೈನ್ ಮಾಡಲಾಗಿತ್ತು. ಆದರೆ, ಇದೀಗ ಬಂದ ವರದಿಯಲ್ಲಿ ಎಸ್‌ಐ ಮತ್ತು ಓರ್ವ ಕಾನ್ಸ್‌ಟೇಬಲ್‌ನಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಮಹಿಳಾ ಎಸ್‌ಐ ಅವರ 22ವರ್ಷದ ಮಗಳಿಗೂ ಸೋಂಕು ತಗುಲಿರುವುದು ಆಘಾತಕ್ಕೆ ಕಾರಣವಾಗಿದೆ.

Also Read  ನಾಳೆ 28 ಶಾಸಕರು ಸಚಿವರಾಗಿ ಪದಗ್ರಹಣ

 

error: Content is protected !!
Scroll to Top