ಶಾಸಕ ಹರೀಶ್ ಪೂಂಜರಿಂದ ವಿನೂತನ ಪ್ರಯೋಗ ➤ SDM ಕ್ಷಯರೋಗ ಆಸ್ಪತ್ರೆ ಈಗ ಕೋವಿಡ್ ಕೇಂದ್ರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.13: ಮಾರಕ ಕೊವೀಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚಾಗುತ್ತಿದ್ದಂತೆ ಸರಕಾರ ತಾಳುಕಿನಲ್ಲಿರುವ ಆಸ್ಪತ್ರೆಗಲಲ್ಲೂ ಕೊರೋನಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷಯ ರೋಗ ಆಸ್ಪತ್ರೆಯನ್ನು ಕೊವೀಡ್ ಕೇಂದರವನ್ನಾಗಿ ಪರಿವರ್ತನೆ ಮಾಡಲಾಗಿದೆ.

 

 

ಈ ಕೇಂದ್ರದಲ್ಲಿ ಕೊರೋನಾ ದೃಢಪಟ್ಟಿರುವ, ಆದರೆ ಕ್ಷಯ ರೋಗ ಲಕ್ಷನವಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ, ಯುವ ನೇತಾರ ಹರೀಶ್ ಪೂಂಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ” ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಿ ಕೊರೋನಾ ದೃಢಪಟ್ಟಿರುವ ಆದರೆ ರೋಗ ಲಕ್ಷಣವಿಲ್ಲದ ಬಂಧುಗಳಿಗಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕ್ಷಯ ರೋಗ ಆಸ್ಪತ್ರೆಯನ್ನು ಕೋವಿಡ್ ಕೇರ್ ಸಂಟರ್ ಆಗಿ ಸಜ್ಜುಗೊಳಿಸಲಾಗಿದೆ”. ಎಂದಿದ್ದಾರೆ.

Also Read  ರೈಲ್ವೆ ಹಳಿ ಮೇಲೆ ವ್ಯಕ್ತಿಯ ಮೃತದೇಹ ಪತ್ತೆ..!

 

error: Content is protected !!
Scroll to Top