(ನ್ಯೂಸ್ ಕಡಬ) newskadaba.com ತುಮಕೂರು,ಸೆ.8, ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಆಗಿದ್ದನ್ನು ನೆಪವಾಗಿಸಿಕೊಂಡು ಮಹಿಳೆಯರಿಬ್ಬರು ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಕಿತ್ತಾಡಿದ ಘಟನೆ ತುಮಕೂರಿನ ಕೋತಿತೋಪಿನಲ್ಲಿ ನಡೆದಿದೆ.
ಕೋತಿತೋಪಿನ ರಸ್ತೆಯಲ್ಲಿ ಹಂಪ್ಸ್ ದಾಟುವಾಗ ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಸಂಭವಿಸಿದೆ. ಈ ಎರಡೂ ವಾಹನಗಳಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು. ಡಿಕ್ಕಿಗೆ ಸಂಬಧಿಸಿ ಮೊದಲು ಪುರುಷರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಧ್ಯಪ್ರವೇಶಿಸಿದ ಮಹಿಳೆಯರಿಬ್ಬರೂ ಅವಾಚ್ಯ ಶಬ್ದಗಳಿಂದ ಬೈದು ಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಇಬ್ಬರು ಮಹಿಳೆಯರು ಜಡೆ ಹಿಡಿದುಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ. ಈ ವೇಳೆ ತಮ್ಮ ತಮ್ಮ ಪತ್ನಿಯರ ಹೊಡೆದಾಟವನ್ನು ಬಿಡಿಸಲು ಗಂಡಂದಿರು ಹರಸಾಹಸ ಪಡಬೇಕಾಯಿತು. ಈ ಜಗಳ ಮಾತ್ರ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆಯನ್ನು ನೀಡಿದೆ.
Also Read ಕೊಂಬಾರು ಸಿ.ಆರ್.ಸಿ. ಕಾಲೋನಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ನಿಗಮದ ಕಛೇರಿ ಎದುರು ಪ್ರತಿಭಟನೆ