ಇಂದು ಪುತ್ತೂರಿನ ನಾಲ್ವರಿಗೆ ಡೆಡ್ಲಿ ಕೊರೋನಾ ದೃಢ!

(ನ್ಯೂಸ್ ಕಡಬ) newskadaba.com ಪುತ್ತೂರು,ಜು.12: ಪುತ್ತೂರು ತಾಲೂಕಿನಲ್ಲಿ ಭಾನುವಾರ ನಾಲ್ಕು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ವೃದ್ಧ ಮೃತಪಟ್ಟಿದ್ದಾರೆ. ಶಾಂತಿಗೋಡಿನ 15 ವರ್ಷದ ಬಾಲಕಿ, ಇಚ್ಲಾಂಪಾಡಿಯ 27 ವರ್ಷದ ಯುವಕ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿದ್ದ ಬಲ್ಯ ಹೊಸ್ಮಠದ 22 ವರ್ಷದ ಯುವತಿ, ಕ್ಯಾಂಫ್ಕೊ ವಸತಿ ಗೃಹದಲ್ಲಿನ 35 ವರ್ಷದ ಗೃಹಿಣಿಗೆ ಇಂದು ಕೋರೋನಾ ಪಾಸಿಟಿವ್ ವರದಿಯಾಗಿದೆ.

 


ಇಚ್ಲಾಂಪಾಡಿಯ ಸೋಂಕಿತ ಯುವಕ ಜುಲೈ 12ರಂದು ವಿದೇಶದಿಂದ ಬಂದು ಮಂಗಳೂರಿನ ಹೊಟೇಲ್‌ವೊಂದರಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಬಳಿಕ ಆತನ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ವರದಿ ಬಂದಿದ್ದು, ಆತನಿಗೆ ಕೊರೋನಾ ಸೋಂಕು ತಗುಲಿರುವುದು ದರಢ ಪಟ್ಟಿದೆ. ಉಳಿದಂತೆ ಶಾಂತಿಗೋಡಿನ 15 ವರ್ಷದ ಬಾಲಕಿ, ಸ್ಟಾಫ್ ನರ್ಸ್, ಹಾಗೂ 35 ವರ್ಷದ ಮಹಿಳೆಯನ್ನು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Also Read  ನಾಳೆ ರಾಜ್ಯದಲ್ಲಿ ಭಾರೀ ಮಳೆ

 

error: Content is protected !!
Scroll to Top