ಮೂಡಿಗೆರೆ: ಚಾಲಕನಿಲ್ಲದೇ ತಾನಾಗೆ ಚಲಿಸಿದ ಕಾರು ➤ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜು.11.ಮಾರ್ಗ ಬದಿಯಲ್ಲಿ ನಿಲ್ಲಿಸಿದ್ದ ಕಾರು ಚಾಲಕನಿಲ್ಲದೇ ತಾನಾಗೆ ಚಲಿಸಿದ ಘಟನೆ ಜಿಲ್ಲೆಯ ಮೂಡಿಗೆರೆ ನಗರದಲ್ಲಿ ನಡೆದಿದೆ.

ಮಾರುತಿ 800 ಕಾರಿನಲ್ಲಿ ಬಂದ ವ್ಯಕ್ತಿ, ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾನೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಯುವತಿ ಕೂತಿದ್ದಳು. ಆದರೆ ಯುವತಿ ಕೂಡ ಕಾರಿನಿಂದ ಕೆಳಗಿಳಿದಿದ್ದಾಳೆ. ಯುವತಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಿಂತಿದ್ದ ಕಾರು ಚಾಲಕನಿಲ್ಲದೇ ತಾನಾಗೇ ಚಲಿಸಲು ಆರಂಭಿಸಿದೆ. ಎಲ್ಲರೂ ಕಾರು ತಾನಾಗೇ ಹೋಗುತ್ತಿದೆ ಎಂದು ಗಾಬರಿಗೊಳಗಾಗಿ ಅಕ್ಕಪಕ್ಕ ಸರಿಯುತ್ತಿದ್ದರು.


ಅದೇ ವೇಳೆಗೆ ಕಾರಿನ ಹಿಂಭಾಗದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟಿ ಸವಾರ ಕಾರು ತಾನಾಗೇ ಹೋಗುವುದನ್ನ ಗಮನಿಸಿ ಓಡಿ ಬಂದು ಕಾರ್ ಡೋರ್ ತೆಗೆದು ಡ್ರೈವರ್ ಸೀಟಲ್ಲಿ ಕೂತು ಕಾರಿನ ಬ್ರೇಕ್ ಹಿಡಿದು ಕಂಟ್ರೋಲ್ ಮಾಡಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ.

Also Read  ರೈಲ್ವೇ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ- ವಿ.ಸೋಮಣ್ಣ


ಅದೇ ರಸ್ತೆಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಜನಜಂಗುಳಿ ಹಾಗೂ ಜನರ ಓಡಾಟ ಹೆಚ್ಚಿತ್ತು. ಕಾರು ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದ್ದು, ಬೈಕ್ ಸವಾರ ಕಾರನ್ನ ಕಂಟ್ರೋಲ್‍ಗೆ ತೆಗೆದುಕೊಂಡು ಸಮಯ ಪ್ರಜ್ಞೆ ಮೆರೆದಿರುವುದರಿಂದ ಅನಾಹುತವೊಂದು ತಪ್ಪಿದಂತಾಗಿದೆ.

ಬೈಕಿನಲ್ಲಿ ಬರುವಾಗ ಕಾರಿನ ಚಾಲಕ ಇಳಿದು ಹೋಗಿದ್ದನ್ನ ಗಮನಿಸಿದ್ದ ಬೈಕ್ ಸವಾರ, ಅದೇ ಕಾರಿನ ಹಿಂದೆ ಬೈಕ್ ಪಾರ್ಕ್ ಮಾಡಿದ್ದನು. ಆತ ಬೈಕ್ ಪಾರ್ಕ್ ಮಾಡುತ್ತಿದ್ದಂತೆ ಕಾರು ಮೂವ್ ಆಗೋದನ್ನ ಕಂಡು ಓಡಿ ಬಂದು ಕಂಟ್ರೋಲ್ ಮಾಡಿದ್ದಾನೆ. ಬೈಕ್ ಸವಾರನ ಈ ಸಮಯಪ್ರಜ್ಞೆಗೆ ಸ್ಥಳೀಯರು ಶ್ಲಾಘಿಸಿದ್ದಾರೆ.

error: Content is protected !!
Scroll to Top