(ನ್ಯೂಸ್ ಕಡಬ) newskadaba.com ಮಂಗಳೂರು,ಜು.10: ಕಳೆದ ಮೂರು ತಿಂಗಳಿನಿಂದ ಸರ್ಕಾರ ಪ್ರೋತ್ಸಾಹ ಧನ ನೀಡದ ಕಾರಣ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಸಂದರ್ಭದಲ್ಲಿ ಹಾಲಿನ ಖರೀದಿ ದರವನ್ನು ಒಕ್ಕೂಟಗಳು ಕಡಿಮೆ ಮಾಡುತ್ತಿರುವುದರಿಂದ ಹಾಲು ಉತ್ಪಾದಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕೊರೊನಾ ಸೋಂಕು ಲಾಕ್‍ಡೌನ್ ಕಾರನದಿಂದ ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪಾನ್ನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದರಿಂದ ಹಾಲು ಉತ್ಪಾಪಾದಕರಿಗೆ ಸಂಕಷ್ಟ ಎದುರಾಗಿದೆ. ಒಕ್ಕೂಟಗಲಲ್ಲಿ ಸಂಗ್ರಹವಾದ ಹಾಲಿನಲ್ಲಿ ಪ್ರತಿದಿನ ಸುಮಾಋಉ 35 ಲಕ್ಷ ಲೀಟರ್ ಹಾಲು ಉಳಿಯುತ್ತಿದ್ದು, ಇದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತದೆ. ಹೊರರಾಜ್ಯಗಳಲ್ಲಿಯೂ ಹಾಳಿನ ಪುಡಿಗೆ ಬೇಡಿಕೆ ಕುಸಿದಿದೆ. ನಷ್ಟ ಸರಿದೂಗಿಸಿಕೊಳ್ಳಲು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಕಡಿಮೆ ಮಾಡಲಾಗಿದೆ. ದಕ್ಷಿಣ ಕನ್ನಡ,ಶಿವಮೊಗ್ಗ, ಧಾರವಾಡ , ಮೈಸುರು, ಧಾರವಾಡ, ಮಂಡ್ಯ, ಹಾಸನ ಮೊದಲಾದ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಗೆ 5 ರೀಪಾಯಿವರೆಗೂ ಹಾಲಿನ ದರವನ್ನು ಕಡಿಮೆ ಮಾಡಿದೆ ಎಂದು ಹೇಳಾಲಾಗಿದೆ.