ಖ್ಯಾತ ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣು!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.08: ಖ್ಯಾತ ಕಿರುತೆರೆ ನಟ, ಅಂತಃಪುರ ಧಾರಾವಾಹಿ ಖ್ಯಾತಿಯ ನಟ ಸುಶೀಲ್​ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಂಡ್ಯದ ಮನೆಯಲ್ಲಿ ನಟ ಸುಶೀಲ್ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟ ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಜಯ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸಲಗದಲ್ಲಿ ಸುಶೀಲ್ ಗೌಡ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದಾರೆ.

 

ಇನ್ನು ಮಂಡ್ಯ ಮೂಲದ ಸುಶೀಲ್​, ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ಇದೀಗ ಅವರ ಸಾವಿಗೆ ಧಾರಾವಾಹಿ ಬಳಗ ಕಂಬನಿ ಮಿಡಿದಿದೆ. ಫಿಟ್​ನೆಸ್​ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುಶೀಲ್​, ಕಿರುತೆರೆ ಜತೆಗೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದರು. ಅದರಂತೆ, ದುನಿಯಾ ವಿಜಯ್​ ನಾಯಕತ್ವ ಮತ್ತು ನಿರ್ದೇಶನದ ‘ಸಲಗ’ ಚಿತ್ರದಲ್ಲಿಯೂ ಪೊಲೀಸ್​ ಪಾತ್ರ ನಿಭಾಯಿಸಿದ್ದರು.

Also Read  ರಾಷ್ಟ್ರೀಯ ಸೆಮಿನಾರ್- ಲೇಖನಗಳನ್ನು ಕಳುಹಿಸಲು ಸೂಚನೆ

 

error: Content is protected !!
Scroll to Top