ಬೆಳ್ಮಣ್ : ಡೆಂಗ್ಯೂಗೆ ನರ್ಸ್ ಬಲಿ

(ನ್ಯೂಸ್ ಕಡಬ) newskadaba.com ಬೆಳ್ಮಣ್,ಜು.08: ಕರಾವಳಿಯಲ್ಲಿ ಕೊರೊನಾ ವ್ಯಾಪಕಗೊಳ್ಳುತ್ತಿರುವ ನಡುವೆ ಮಾರಕ ಡೆಂಗ್ಯೂ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿದೆ. ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯ ನರ್ಸ್ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಬೆಳ್ಮಣ್ ನಿವಾಸಿ ದಿವ್ಯಾ (23) ಮೃತ ನರ್ಸ್. ದಿವ್ಯಾ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದರು. ನಂತರ ತಾನೇ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿವ್ಯಾ ಸಾವನ್ನಪ್ಪಿದ್ದಾರೆ.ಸೋಮವಾರ ಜ್ವರವು ಉಬ್ಬಣಗೊಂಡ ಪರಿಣಾಮ ದಿವ್ಯಾರನ್ನು ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ದಾಖಲಿಸಿದ ಒಂದು ಗಂಟೆಯಲ್ಲಿ ದಿವ್ಯಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

Also Read  ಟ್ರಕ್ ನಲ್ಲಿ 10 ಟನ್ ದನದ ಮಾಂಸ ಸಾಗಾಟ ➤ ಇಬ್ಬರು ಆರೋಪಿಗಳ ಅರೆಸ್ಟ್

 

error: Content is protected !!
Scroll to Top