ಕೋಟ :ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು SSLC ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ,ಜು.08: ಕೊರೋನಾ  ಕ್ವಾರಂಟೈನ್​ ವಿಚಾರವಾಗಿ SSLC ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಾಲಿಗ್ರಾಮದ ಮಾಣಿಕಟ್ಟಿನಲ್ಲಿ ಮಂಗಳವಾರ ನಡೆದಿದೆ.

15 ವರುಷದ ಕಾರ್ತಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಕೋಟ ವಿವೇಕ ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ. ಇತ್ತೀಚಿಗೆ ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಕರೊನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ತಾಯಿ ರುದ್ರಮ್ಮ ಮತ್ತು ಮಗನಿಗೆ ಹೋಂ ಕ್ವಾರಂಟೈನ್ ಹಾಕಲಾಗಿತ್ತು.ಇದೇ ವಿಚಾರವಾಗಿ ತುಂಬಾ ದುಃಖದಲ್ಲಿದ್ದ ಕಾರ್ತಿಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತನ ಕೊವೀಡ್ ವರದಿ ಬಂದ ಬಳಿಕ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ➤ ನಿರೀಕ್ಷಣಾ ಜಾಮೀನು ಪಡೆದ ಕಾಂಗ್ರೆಸ್ ಮುಖಂಡ

error: Content is protected !!
Scroll to Top