ಕೊರೋನಾ ಸೋಂಕು ➤ ಪುತ್ತೂರು ಮೂಲದ ಬಾಣಂತಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು,ಜು.08: ಕೊರೋನಾ ಸೋಂಕಿತ ಪುತ್ತೂರು ಮೂಲದ ಬಾಣಂತಿ ಒಬ್ಬರು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗೆ ಹೆರಿಗೆ0ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೂರ್ನಡ್ಕ ನಿವಾಸಿಯೊಬ್ಬರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಆಕೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಮಹಿಳೆ ಹೆರಿಯಾದ ಬಳಿಕ ಮಹಿಳೆ ಮತ್ತು ಹಸುಳೆಯನ್ನು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇದೀಗ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ನಸುಕಿನ ಜಾವ ಮೃತಪಟ್ಟಿರುವುದು ತಿಳಿದು ಬಂದಿದೆ. ಮಹಿಳೆಯ ಮೃತ ದೇಹವವನ್ನು ಪುತ್ತೂರಿಗೆ ತರಲಾಗುವುದು. ಬಳಿಕ ಬೆದ್ರಾಳದಲ್ಲಿ ಕೋವಿಡ್ ಸುರಕ್ಷೆಯೊಂದಿಗೆ ಕಾರ್ಯ ನಡೆಯಲಿದೆ ಎಂದು ಮಾಹಿತಿ ಬಂದಿದೆ.

Also Read  ಸುಳ್ಯ: ಬೈಕ್ ಅಪಘಾತ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top