(ನ್ಯೂಸ್ ಕಡಬ) newskadaba.com ಮಂಗಳೂರು ,ಜು.06: ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಮತ್ತೆ ಸಂಡೇ ಲಾಕ್ ಡೌನ್ ಜಾರಿ ಮಾಡುತ್ತಿದೆ. ಪ್ರತಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಲಾಕ್ ಡೌನ್ ಮಾಡಿದೆ. ಈ ಸಮಯದಲ್ಲಿ ಕೆಲವರು ಮನೆಯಲ್ಲಿ ಕುಳಿತು ಕೆಲಸ ಮಾಡಿದ್ದಾರೆ. ಆದರೇ, ಬಿ.ಸಿ ರೋಡಿನ ಬಿಜೆಪಿ ಕಾರ್ಯಕರ್ತರು ಸಂಡೇ ಲಾಕ್ ಡೌನ್ ಅನ್ನ ಸದುಪಯೋಗಪಡಿಸಿಕೊಂಡು ಬಿ.ಸಿ ರೋಡಿನಲ್ಲಿ ರಸ್ತೆ ಹೊಂಡಗಳನ್ನು ಮುಚ್ಚುವ ಮೂಲಕ ಉತ್ತಮ ಕಾರ್ಯವನ್ನ ಮಾಡಿದ್ದಾರೆ.
ಭಾನುವಾರ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಜೆಪಿಯ ಬಿ.ಸಿ ರೋಡಿನ ಕಾರ್ಯಕರ್ತರು ಬ.ಸಿ.ರೋಡಿನ ಪ್ರಮುಖ ಜಾಗಗಳಲ್ಲಿದ್ದ ರಸ್ತೆ ಹೊಂಡಗಳನ್ನು ಮುಚ್ಚುವ ಮೂಲಕ ಸದುಪಯೋಗಪಡಿಸಿದರು. ಬಿ.ಸಿ ರೋಡಿನ ಹೆದ್ದಾರಿ, ಸರ್ವೀಸ್ ರಸ್ತೆಗಳಲ್ಲಿ ರಸ್ತೆ ಹದಗೆಟ್ಟಿದ್ದು, ಸುಗಮ ವಾಹನ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿತ್ತು. ಅದರಲ್ಲೂ ಬಿ.ಸಿ ರೋಡಿನ ರಸ್ತರ ಹೊಂಡ ಇರುವ ಜಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು, ಕೆಲವು ದಿನಗಳ ಹಿಂದೆ ಒಂದೆರಡು ಬೈಕ್ ಸವಾರರು ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಹೊಂಡ ಮುಚ್ಚಲು ಹೊಂಡ ಮುಚ್ಚಲು ಹೊರಟ ಬಿಜೆಪಿ ಕಾರ್ಯಕರ್ತರು, ಹೊಂಡಗಳನ್ನು ಕಲ್ಲಿನಿಂದ ಮುಚ್ಚಿ ಅದರ ಮೇಲೆ ಕಾಂಕ್ರೀಟ್ ಹಾಕಿದರು. ನೆಲಕ್ಕೆ ಕಲ್ಲು ಹಾಸಿ ಕಾಂಕ್ರೀಟ್ ಹಾಕಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿಯಾದರೂ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಮಾಡಿದರು. ಈ ವೇಳೆ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಪ್ರದೀಪ್ ಅಜ್ಜಿಬೆಟ್ಟು, ಲಕ್ಷ್ಮಣ್ ರಾಜ್ ಬಿ.ಸಿ ರೋಡ್, ಶೈಲೇಶ್ ಬಿಸಿರೋಡ್, ಅಶ್ವಿತ್ ಅಜ್ಜಿಬೆಟ್ಟು, ಶಶಿಧರ್ ಕೈಕುಂಜೆ, ಗಣೇಶ್ ದಾಸ್ ಪಲ್ಲಮಜಲ್, ಪ್ರದೀಪ್ ಪುಟ್ಟ ಮೊದಲಾದವರು ಉಪಸ್ಥಿತರಿದ್ದರು.