ಎಡೆಬಿಡದೆ ಸುರಿದ ಮಳೆರಾಯ ➤ ಕುಮಾರಧಾರಾ ನೀರಿನ ಮಟ್ಟದಲ್ಲಿ ಏರಿಕೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜು.06: ಒಂದೆಡೆ ಕೊರೊನಾ ಕಾಟ ಹೆಚ್ಚಾಗುತ್ತಿದ್ದಾರೆ, ಮತ್ತೊಂದೆಡೆ ವರುಣನ ಆರ್ಭಟ ಹೆಚ್ಚುತ್ತಿದೆ. ಇದೀಗಾ ಕುಕ್ಕೆ ಸುಬ್ರಹ್ಮಣ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ರವಿವಾರವೂ ಮಳೆಯಾಗಿದ್ದು, ಕುಮಾರಧಾರಾ ನದಿ ನೀರಿನ ಹರಿವು ಹೆಚ್ಚಳಗೊಂಡಿದೆ.

ಕುಮಾರ ಪರ್ವತ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ಸುಬ್ರಹ್ಮಣ್ಯ ಸುತ್ತಮುತ್ತಲಿನ ಪರಿಸರದಲ್ಲೂ ಭಾರೀ ಮಳೆಯಾಗಿದೆ. ಸಣ್ಣ ಪುಟ್ಟ ನದಿ, ತೊರೆಗಳು ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿವೆ. ಅಲ್ಲದೆ ಕೆಲವೊಂದು ತಗ್ಗು ಪ್ರದೇಶ ಹಾಗೂ ಕೃಷಿ ತೋಟಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ತುಂಬಿತ್ತು. ಜನರ ಓಡಾಟ, ವಾಹನ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ತೊಡಕು ಉಂಟಾಗಿದೆ.ಪುತ್ತೂರು , ಸುಳ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ನದಿ, ಹೊಳೆ ನೀರಿನ ಮಟ್ಟ ಹೆಚ್ಚಳಗೊಂಡಿದೆ.

Also Read  ಎಸ್ಕೇಪ್ ಆಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ.!

 

error: Content is protected !!
Scroll to Top