ಬಂಗ್ಲಗುಡ್ಡೆಯಲ್ಲಿ ಭೂಕುಸಿತ ➤ ಮಣ್ಣಿನಡಿಯಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು,ಜು.05: ಮಂಗಳೂರಿನ ಕೈಕಂಬ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ಸುಮಾರು ಮನೆಗಳಿಗೆ ಸಂಪೂರ್ಣವಾಗಿ ಹಾನಿ ಉಂಟಾದರೆ ಹಲವು ಮನೆಗಳು ಅಪಾಯದಲ್ಲಿದೆ. ಈ ಘಟನೆಯಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ, ಇಬ್ಬರು ಪುಟಾಣಿಗಳು ದುರ್ಮರಣ ಹೊಂದಿದ್ದಾರೆ.

 


ಮೃತಪಟ್ಟವರನ್ನು ಮಕ್ಕಳನ್ನು ಸಫ್ವಾನ್ (16), ಸಹಾಲ (10) ಎಂದು ತಿಳಿದುಬಂದಿದೆ.ಗಂಟೆಗಳ ಪ್ರಯತ್ನದ ನಂತರ, ಪೊಲೀಸರ ಸಹಾಯದಿಂದ ಸ್ಥಳೀಯರು ಮಕ್ಕಳನ್ನು ಹೊರಗೆ ತರಲು ಸಾಧ್ಯವಾಯಿತ್ತಾದರೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ 14 ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

Also Read  ತುಂಬು ಗರ್ಭಿಣಿ ಮಹಿಳಾ ಕಾನ್ಸ್‌ಟೇಬಲ್ ನ್ನು ಬಂದೋಬಸ್ತ್ ಗೆ ನಿಯೋಜನೆ ➤ ವರದಿ ಕೇಳಿದ ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ

 

error: Content is protected !!
Scroll to Top