ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸ್ತಬ್ಧವಾದ ಮಂಗಳೂರು

(ನ್ಯೂಸ್ ಕಡಬ) newskadaba.com ಮಂಗಳೂರು ,ಜು.05: ಕಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ನಗರ ಅಕ್ಷರಶಃ ಸ್ತಬ್ದವಾಗಿದೆ. ನಗರದ ಹಾದಿ ಬೀದಿಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು ಅಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಪಹರೆ ನೀಡುತ್ತಿಸ್ದಾರೆ. ನಗರದ ಪ್ರಮುಖ ರಸ್ತೆಗಳು ಮಾತ್ರ ವಲ್ಲದೆ ಒಳ ರಸ್ತೆ ಗಳು ಬಹುತೇಕ ನಿರ್ಜನವಾಗಿವೆ. ಕೆಲವೇ ಕೆಲವರು ಮನೆ ಸಮೀಪದ ಹಾಲಿನ ಅಂಗಡಿಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿದೆ.

 

ನಗರದ ಪ್ರಮುಖ ರಸ್ತೆಗಳಲ್ಕಿ ಕೆಲವೊಂದು ಸರಕು ಸಾಗಾಣಿಕೆಯ ವಾಹನ, ಆಸ್ಪತ್ರೆ ಸಿಬ್ಬಂದಿ ಸಾಗಿಸುವ ವಾಹನಗಳು ಮಾತ್ರ ಓಡಾಡುತ್ತಿವೆ. ನಗರದ ಪಂಪ್ವೆಲ್, ಜಪ್ಪಿನಮೊಗರು, ಅಂಬೇಡ್ಕರ್ ವ್ರತ್ತ, ಕ್ಲಾ ಕ್ ಟವರ್, ಮೊದಲಾದ ಆಯಾ ಕಟ್ಟಿನ ಸ್ಥಳ ಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಪರೂಪಕ್ಕೆ ಓಡಾಟ ನಡೆಸುತ್ತಿರುವ ವಾಹನಗಳನ್ನು ತಡೆದುವ ವಿಚಾರಿಸಸುತ್ತಿದ್ದಾರೆ.

Also Read  ಪೊಲೀಸರಿಗೆ ಗುಡ್ ನ್ಯೂಸ್ - ಹುಟ್ಟು ಹಬ್ಬದ ದಿನ ರಜೆ

error: Content is protected !!
Scroll to Top