ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ

(ನ್ಯೂಸ್ ಕಡಬ) newskadaba.com ಸವಣೂರು,ಜು.05:ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಸವಣೂರು ಪೇಟೆ ಜು. 5ರಂದು ಸಂಪೂರ್ಣ ಲಾಕ್ ಡೌನ್ ಆಗಿದ್ದು,ಸವಣೂರು ಪೇಟೆ ಅಕ್ಷರಶ: ಸಬ್ಧವಾಗಿದೆ.

 

ಪ್ರತಿ ನಿತ್ಯ ಸವಣೂರು ಪೇಟೆ ಸಾವಿರಾರು ಮಂದಿ ಸೇರುವ ಅತೀದೊಡ್ಡ ವಾಣಿಜ್ಯ ಕೇಂದ್ರ ಹಾಗೂ ರಾಜ್ಯದ ಮನೆ ಮಾತಾಗಿರುವ ಶಿಕ್ಷಣ ಕಾಶಿ ಹಾಗೂ ಧಾರ್ಮಿಕ ನೆಲೆಬೀಡು ಸವಣೂರು ಪೇಟೆಯಲ್ಲಿ ಆನೇಕ ಬ್ಯಾಂಕ್ ಗಳು ಸೇರಿದಂತೆ, ಅಡಿಕೆ ಖರೀದಿ ಕೇಂದ್ರ, ಜಿನಸು ಅಂಗಡಿಗಳು, 7 ಹೋಟೆಲ್ ಗಳು, ಸಹಿತ ವಿವಿಧ ಬಗೆಯ ವ್ಯಾಪಾರ ಕೇಂದ್ರ ಗಳನ್ನು ಹೊಂದಿರುವ ಸವಣೂರು ಇಂದು ಸಂಪೂರ್ಣ ಸ್ತಬ್ಧವಾಗಿದೆ. ಇಲ್ಲಿನ ಗ್ರಾಮ ಪಂಚಾಯತ್,ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯು ಕೊರೋನಾ ಖಾಯಿಲೆ ಸವಣೂರಿಗೆ ಬರದಂತೆ ಬಹಳಷ್ಟು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಇನ್ನು, ಇದಕ್ಕೆ ಜನಪ್ರತಿನಿಧಿಗಳು, ವಿವಿಧ ಸಂಘಟನೆಯ ಸಹಕಾರ ದೊರೆತಿದೆ.

Also Read  ವೇಣೂರು: ಫ್ಯಾನ್ ಗೆ ಬೆಡ್ ಶೀಟ್ ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ

 

error: Content is protected !!
Scroll to Top