ಜು. 5 ಸಂಪೂರ್ಣ ಲಾಕ್‌ಡೌನ್‌‌‌‌‌ ➤ ಮಂಗಳೂರು-ಉಡುಪಿಯಲ್ಲಿ ಸರ್ಕಾರಿ, ಖಾಸಗಿ ಬಸ್ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕರಾವಳಿ,ಜು.04: ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಕರ್ನಾಟಕದಲ್ಲಿ ಸಂಡೇ ಲಾಕ್ ಡೌನ್ ನನ್ನ ರಾಜ್ಯ ಸರ್ಕಾರ ಜಾರಿಗೆ ತಂದಿದೆ.ಜುಲೈ 5ರಂದು ಸಂಪೂರ್ಣ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆ ಉಡುಪಿ-ಮಂಗಳೂರು ಕೆ.ಎಸ್‌‌.ಆರ್‌.ಟಿ.ಸಿ ಸೇರಿ ಖಾಸಗಿ ಬಸ್ ಸಂಚಾರ ಬಂದ್‌‌ ಮಾಡಲು ಬಸ್‌ ಮಾಲೀಕರು ನಿರ್ಧರಿಸಿದ್ದಾರೆ.

 

ಭಾನುವಾರ ಬೆಳಗ್ಗೆಯಿಂದ ಸೋಮವಾರ ಸಂಚಾರ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲು ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ. ಈ ಹಿಂದೆ ಭಾನುವಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದ ಸಂದರ್ಭ ಕೆಎಸ್‌ ಆರ್‌ಟಿಸಿ ಬಸ್‌‌ಗಳು ಸಂಚಾರ ಮಾಡಿವೆ. ಆದರೆ, ಜುಲೈ 5ರ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುವುದರಿಂದ ಭಾನುವಾರ ಬೆಳಗ್ಗೆಯಿಂದ ಸೋಮವಾರ ಬೆಳಗ್ಗೆವರೆಗೆ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಕೆಎಸ್ ಆರ್‌ಟಿಸಿಯಿಂದ ಅಧಿಕೃತ ಪ್ರಕಟಣೆಯಾಗಿದೆ. ಹಾಗಾಗಿ ಸಂಡೇ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರವಿರೋದಿಲ್ಲ, ಸಂಚಾರ ಮಾಡುವ ಪ್ಲ್ಯಾನ್ ಏನಾದ್ರು ಮಾಡಿಕೊಂಡಿದ್ದರೆ, ಅಂತಹವರು ತಮ್ಮ ಪ್ಲ್ಯಾನ್ ಗಲನ್ನ ಬದಲಾಯಿಸಿಕೊಳ್ಳುವುದು ಉತ್ತಮ .

Also Read  ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ► ದಸರಾ ರಜೆ ಕಡಿತಕ್ಕೆ ಬಿತ್ತು ಕತ್ತರಿ

 

error: Content is protected !!
Scroll to Top