ಮಗನಿಗೆ ಕೊರೋನಾ ದೃಢ ➤ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರನಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಜು.03: ಎರಡೂವರೆ ವರ್ಷದ ಮಗನಿಗೆ ಕೊರೋನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರರೊಬ್ಬರಿಗೆ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

 

ಧಾರವಾಡ ಮೂಲದ ಈ ನೌಕರನ ಪತ್ನಿ ಹಾಗು ಮಕ್ಕಳು ಊರಲ್ಲಿಯೇ ಇದ್ದರು. ಮಗುವಿಗೆ ಜ್ವರ ಇದ್ದಕಾರಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಸಂದರ್ಭ ಕೊರೋನಾ ಪರೀಕ್ಷೆಗೆ ಗಂಟಲ ದ್ರವದ ಮಾದರಿಯನ್ನ ತೆಗೆಯಲಾಗಿತ್ತು. ಇನ್ನು, ನಿನ್ನೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ಮರಳಿ ಕತ್ವ್ಯಕ್ಕೆ ಹಾಜರಾಗಿದ್ದರು.ಇಂದು ಮಗುವಿನ ಗಂಟಲ ದ್ರವ ವರದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈ ಹಿನ್ನಲೆ, ಆರೋಗ್ಯಧಿಕಾರಿಗಳ ಸೂಚನೆ ಮೇರೆಗೆ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

Also Read  ಭದ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಮಿತಿ ರಚನೆ- ಡಾ.ಶರಣ್ ಪ್ರಕಾಶ ಪಾಟೀಲ್‌

 

error: Content is protected !!
Scroll to Top