ಮಂಗಳೂರು :ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದ ಪತಿ.!

(ನ್ಯೂಸ್ ಕಡಬ) newskadaba.com ಮಂಗಳೂರು,ಜು.03: ಕಾವೂರಿನ ಟಿಪ್ಪರ್ ಚಾಲಕ ಗಣೇಶ್ ತನ್ನ ಪತ್ನಿ ಶಾಂತಾ  ಅವರನ್ನು ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಪತಿ-ಪತ್ನಿ ಮಧ್ಯೆ ವಿರಸ ಉಂಟಾದ ಕಾರಣ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು, ಕೆಲವು ಸಮಯ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆತ ಆಕೆಯ ಮನೆಗೆ ತೆರಳಿ ಮಾತುಕತೆ ನಡೆಸಿ ಕಾವೂರಿಗೆ ಕರೆಸಿಕೊಂಡಿದ್ದನು.

 

ಬುಧವಾರ ಸಂಜೆ ಗಣೇಶ್ ಪತ್ನಿ ಶಾಂತಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದು, ವಾಪಸ್ ಬಂದಿರಲಿಲ್ಲ. ಗುರುವಾರ ಸಂಜೆ ಗಣೇಶ್ ತನ್ನ ಮನೆಗೆ ಫೋನ್ ಮಾಡಿ ಪತ್ನಿಯನ್ನು ತಾನು ಕೊಲೆ ಮಾಡಿರುವುದಾಗಿ ಅತ್ತೆಗೆ ತಿಳಿಸಿದ್ದಾನೆ. ಅತ್ತೆ ಬಳಿಕ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಆರೋಪಿ ಗಣೇಶ್ ಪತ್ನಿಯನ್ನು ಟಿಪ್ಪರ್ನಲ್ಲಿ ಕಲ್ಲು ಸಾಗಾಟ ಕೆಲಸ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕ್ವಾರಿಗೆ ದೂಡಿ ಹಾಕಿದ. ಕಾವೂರು ಪೊಲೀಸರು ಗುರುವಾರ ರಾತ್ರಿ ಕರಂಬಾರಿಗೆ ತೆರಳಿ ಶಾಂತಾ ಅವರ ಶವವನ್ನು ಪತ್ತೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Also Read  ಮಂಗಳೂರು ಕೃಷಿ ಇಲಾಖೆಯಿಂದ ಟೆಂಡರ್ ಆಹ್ವಾನ

 

error: Content is protected !!
Scroll to Top