(ನ್ಯೂಸ್ ಕಡಬ) newskadaba.com ಉಡುಪಿ ,ಜು.03: ಜಿಲ್ಲೆಯಲ್ಲಿ ಕೊರೋನಾ ತನ್ನ ವರಸೆಯನ್ನು ಬದಲಾಯಿಸುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಉಡುಪಿಯಲ್ಲಿ ಒಂದು ವರ್ಷದ ಹೆಣ್ಣು ಮಗು ಸಹಿತ 14 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಮಹಾರಾಷ್ಟ್ರದಿಂದ ಬಂದವರು ನಾಲ್ವರು. ಕೇರಳದಿಂದ ಬಂದ ಒಬ್ಬರಿದ್ದಾರೆ. ಬೆಂಗಳೂರಿನ ಆತಂಕ ಮುಂದುವರಿದಿದ್ದು, ಅಲ್ಲಿಂದ ಬಂದ 4 ಮಂದಿಗೆ ಸೋಂಕು ತಗುಲಿದೆ.
ಸೋಂಕು ಕಾಣಿಸಿಕೊಂಡ ಪ್ರಾಥಮಿಕ ಸಂಪರ್ಕದಿಂದ ಐವರಿಗೆ ಸೋಂಕು ತಗುಲಿದೆ. ಎಲ್ಲ 14 ಮಂದಿಯನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 256 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಕೋವಿಡ್ ಪರೀಕ್ಷೆಗಾಗಿ 811 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 938 ಮಂದಿರ ವರದಿ ಬರಲು ಬಾಕಿ ಇದೆ. ಒಟ್ಟು ಪ್ರಕರಣಗಳ ಸಂಖ್ಯೆ 1242ಕ್ಕೆ ಏರಿಕೆಯಾಗಿದ್ದು, ಇಲ್ಲಿವರೆಗೆ 1090 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 149 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.