ಸ್ಯಾಂಡಲ್ ವುಡ್ ನ ‘ಗೋಲ್ಡನ್ ಗಣಿ’ಗೆ ಬರ್ತ್ ಡೇ ಸಂಭ್ರಮ ➤ ಸೆಟ್ಟೇರಿದೆ ಹೊಸ ಸಿನಿಮಾ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: ಗೋಲ್ಡನ್​ ಸ್ಟಾರ್​ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ನಟ ಗಣೇಶ್​ ಅವರ ಫೋಟೋ ಹಾಕಿಕೊಂಡು ಬರ್ತ್​​​ ಡೇಗೆ ವಿಶ್​ ಮಾಡುತ್ತಿದ್ದಾರೆ. ಟ್ವಿಟ್ಟರ್​ನಲ್ಲಿ ಹ್ಯಾಪಿ ಬತ್​​​ ಡೇ ಗಣೇಶ್​ ಎಂಬ ಹ್ಯಾಶ್​​ಟ್ಯಾಗ್​ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ.  ಈ ದಿನಕ್ಕೆ ಅವರ ಅಭಿಮಾನಿಗಳಾಗಿ ಎರಡು ಹೊಸ ಸಿನಿಮಾಗಳ ಘೋಷಣೆಯ ಸಿಹಿ ಸುದ್ದಿ ಸಿಕ್ಕಿದೆ.

ಇನ್ನು, ಈ ಬಾರಿ ಕೊರೋನಾದಿಂದಾಗಿ ಗಣೇಶ್ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಷಯಗಳ ಸುರಿಮಳೆಗೈಯುತ್ತಿದ್ದಾರೆ.ನಿನ್ನೆ ಸಂಜೆ ಗಣೇಶ್ ಅಭಿನಯದ ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿತ್ತು. ಇಂದು ಇನ್ನೂ ಹೆಸರಿಡದ ಹೊಸ ಸಿನಿಮಾ ಸೆಟ್ಟೇರಿದೆ. ಹಾಗೂ ಇನ್ನೊಂದು ತ್ರಿಬಲ್ ರೈಡಿಂಗ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Also Read  ಸಮುದ್ರ ತೀರದಲ್ಲಿ ಅಪರಿಚಿತ ಮೃತದೇಹ ಪತ್ತೆ...!

 

 

error: Content is protected !!
Scroll to Top