ಜೈಲಿಗೂ ವಕ್ಕರಿಸಿದ ಸೋಂಕು ➤ 20 ಕೈದಿಗಳು, 6 ಮಂದಿ ಜೈಲು ಸಿಬ್ಬಂದಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.02. ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ಆರ್ಭಟವನ್ನು ಜಾಸ್ತಿ ಮಾಡುತ್ತಿದ್ದು, ಈಗ ಪರಪ್ಪನ ಅಗ್ರಹಾರಕ್ಕೂ ವಕ್ಕರಿಸಿದೆ.


ಸಿಲಿಕಾನ್ ಸಿಟಿಯ ಸೆಂಟ್ರಲ್ ಜೈಲಿನಲಿದ್ದ 20 ಕೈದಿಗಳು ಮತ್ತು ಆರು ಮಂದಿ ಜೈಲು ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹೊಸದಾಗಿ ಅರೆಸ್ಟ್ ಆಗಿ ಜೈಲಿಗೆ ತೆರಳಿದ್ದ ಅರೋಪಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮೂರು ದಿನಗಳ ಹಿಂದೆ ಜೈಲಿನಲ್ಲಿದ್ದ ಸುಮಾರು 150 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಇದರ ವರದಿ ಬಂದಿದ್ದು, 150 ಜನರ ಪೈಕಿ ಜೈಲು ಸಿಬ್ಬಂದಿಗೂ ಸೇರಿಸಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಹೊಸದಾಗಿ ಬಂದ 450 ಆರೋಪಿಗಳನ್ನು ಬೇರೆ ಕೈದಿಗಳ ಜೊತೆ ಸಂಪರ್ಕ ಇಲ್ಲದಂತೆ ಮಾಡಲಾಗಿತ್ತು. ಜೈಲಿಗೆ ಬಂದ ಪ್ರತಿ ಕೈದಿಯನ್ನು 21 ದಿನ ಕ್ವಾರಂಟೈನ್ ಮಾಡಲಾಗುತಿತ್ತು. ಕ್ವಾರಂಟೈನ್‍ನಲ್ಲಿದ್ದ ಕೈದಿಗಳಿಗೆ ಈಗ ಕೋವಿಡ್ ದೃಢಪಟ್ಟಿದೆ.

Also Read  ಮುಡಾ ಕೇಸ್| ರಾಜ್ಯಪಾಲರ ನಡೆ ಅಕ್ಷಮ್ಯ ಅಪರಾಧ ಸಚಿವ ದಿನೇಶ್ ಗುಂಡೂರಾವ್

ಸೋಂಕು ದೃಢಪಟ್ಟ ಎಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಬಂಧನವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಿದ್ದರು. 22ನೇ ದಿನದ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ ಫ್ರೀಡಂ ಪಾರ್ಕ್ ಬಳಿ ಇರುವ ಜೈಲು ಅಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತಿದ್ದ ಸಿಬ್ಬಂದಿಗೂ ಕೊರೊನಾ ಕಾಣಿಸಿಕೊಂಡಿದೆ.

error: Content is protected !!
Scroll to Top