ಮಂಗಳೂರು : 7 ದಿನದ ಕಂದಮ್ಮನಿಗೂ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು ,ಜು.02: ದ.ಕ. ಜಿಲ್ಲೆಯಲ್ಲಿ 7 ದಿನದ ಕಂದಮ್ಮನಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ. ಏಳು ದಿನದ ಹಿಂದೆ ಜನಿಸಿದ ಹಸುಗೂಸಿನಲ್ಲೂ ಇದೀಗ ಸೋಂಕು ದೃಢಪಟ್ಟಿದೆ.

 

ಸೋಂಕಿತ ಸಂಪರ್ಕದಿಂದಲೇ 7 ದಿನದ ಕಂದಮ್ಮನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇದೀಗ ಕಂದಮ್ಮನನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.  ಈ ನಡುವೆ ಯುವಕರು ಹಾಗೂ ಹಿರಿಯರಲ್ಲೂ ಕೊರೊನಾ ಸೋಂಕು ದೃಢಪಟ್ಟಿದೆ.

Also Read  ಇಂದಿನಿಂದ "ಹೈ ವೇವ್ ಅಲರ್ಟ್”

 

 

error: Content is protected !!
Scroll to Top