ಮಂಗಳೂರು: ಪೈಲೆಟ್ ತರಬೇತಿ ಪಡೆದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.02: ಪೈಲೆಟ್ ತರಬೇತಿ ಪಡೆದಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮರೋಳಿಯಲ್ಲಿ ಬುಧವಾರ ನಡೆದಿದೆ. ನೂರಾರು ಕನಸುಗಳನ್ನ ಕಟ್ಟಿಕೊಂಡು ಪೈಲೆಟ್ ತರಬೇತಿ ಪಡೆದಿದ್ದ ಯುವಕನೋರ್ವ ಬುಧವಾರದಂದು ನೇಣು ಬಿಗಿದುಕೊಂಡಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 


ಮೃತ ಯುವಕ 32 ವರುಷದ ಅದ್ವೈತ ಶೆಟ್ಟಿನಗರದ ಮರೋಳಿ ನಿವಾಸಿಯಾಗಿದ್ದು ಪೈಲೆಟ್‌ ತರಬೇತಿ ಮುಗಿಸಿ ಕೆಲಸ ಹುಡುಕುತ್ತಿದ್ದರು. ಮೂರು ದಿನಗಳ ಹಿಂದೆ ಊರಿಗೆ ಮರಳಿದ್ದು ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊರೋನಾ ಅಟ್ಟಹಾಸಕ್ಕೆ, ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆನೇಕ ಕನ್ನಡಿಗರು, ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ವಾಪಾಸ್ಸಗಿದ್ದಾರೆ. ಇದರ ಜೊತೆಗೆ ಆನೇಕ ಕಂಪನಿಗಳು ನಷ್ಟದಿಂದ ನೌಕರಿಗೆ ಸಂಬಳ ಕೊಡಲಾಗದೆ, ನೆಲಕಚ್ಚಿದೆ. ಉದ್ಯೋಗ್ಯವಿಲ್ಲದೆ ಆನೇಕರು ಸಾವಿನ ದಾರಿ ಕಂಡುಕೊಳ್ಳುತ್ತಿರುವುದು ವಿಪಯಾಸವೇ ಸರಿ.

Also Read  ಲೋಕಸಭಾ ಚುನಾವಣಾ ವೇಳೆ ನೀತಿ ಸಂಹಿತೆ ಉಲ್ಲಂಘನೆ ► ಕೇಂದ್ರ ಸಚಿವ ಸದಾನಂದ ಗೌಡ ವಿರುದ್ಧದ ಎಫ್ಐಆರ್ ರದ್ದು.!!

 

error: Content is protected !!
Scroll to Top