ಕಡಬ ಗ್ರಾ.ಪಂ.ನಲ್ಲಿ ಜಮಾಬಂಧಿ ► ಕೊರುಂದೂರು ಅಂಗನವಾಡಿ ಕಟ್ಟಡ ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, 2016-17ನೇ ಸಾಲಿನ ಜಮಾಬಂಧಿ ಕಡಬ ಗ್ರಾ.ಪಂ.ಸಭಾಂಗಣದಲ್ಲಿ ತಾಲೂಕು ಹಿಂದುಳಿದ ಕಲ್ಯಾಣ ಇಲಾಖಾಧಿಕಾರಿ ಕುಮಾರ್ ಎಸ್ ರವರ ನೇತೃತ್ವದಲ್ಲಿ ನಡೆಯಿತು.

ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಉಪಾಧ್ಯಕ್ಷೆ ಜ್ಯೋತಿ ಡಿ ಕೋಲ್ಪೆ, ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ, ಶೆರೀಫ್ ಎ.ಎಸ್, ನೀಲಾವತಿ, ಶಾಲಿನಿ ಸತೀಶ್ ನಾೖಕ್, ನಾರಾಯಣ ಪೂಜಾರಿ, ರೇವತಿ, ಹರ್ಷ, ಮಾಧವ, ಇಂದಿರಾ, ಸರೋಜಿನಿ ಆಚಾರ್, ಯಶೋಧ, ಆದಂ ಕುಂಡೋಳಿ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Also Read  SSLC ಪರೀಕ್ಷೆಗೆ ಸಿದ್ಧತೆ ಪೂರ್ಣ ➤ ಎರಡೂ ಜಿಲ್ಲೆಗಳ ಶಾಲಾ ಆವರಣ ಸ್ಯಾನಿಟೈಸ್

ಪಂಚಾಯತ್ ಅಭಿವೃದ್ದಿ ಅಧಿಕಾರಿ ಸ್ವಾಗತಿಸಿ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಆನಂದ ವರದಿ ವಾಚಿಸಿದರು. ಲೆಕ್ಕಸಹಾಯಕ ಭುವನೇಂದ್ರ ಕುಮಾರ್ ವಂದಿಸಿದರು. ಜಮಾಬಂಧಿ ಬಳಿಕ ಓಣಿಬಾಗಿಲು, ಅಡ್ಡಗದ್ದೆ, ಕಾಂಕ್ರೀಟ್ ರಸ್ತೆಗಳನ್ನು ಹಾಗೂ ಕೊರುಂದೂರು ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಜಮಾಬಂಧಿ ಅಧಿಕಾರಿ ಕುಮಾರ್ ಎಸ್ ರವರು ಪರಿಶೀಲಿಸಿದರು.

error: Content is protected !!
Scroll to Top