ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ನಿಧನ ➤ ಚಿತ್ರರಂಗದ ಗಣ್ಯರ ಸಂತಾಪ

(ನ್ಯೂಸ್ ಕಡಬ) newskadaba.com ಬೆಂಗಳೂರು,ಜು.02: 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ಮಿಮಿಕ್ರಿ ರಾಜಗೋಪಾಲ್‌ ಬುಧವಾರ  ರಾತ್ರಿ ಕೊನೆಯುಸಿರೆಳೆದರು. ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ಅವರು ಜು.1ರ ರಾತ್ರಿ ನಿಧನರಾದರು. 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೇದಿಕೆಗಳಲ್ಲಿ ಮಿಮಿಕ್ರಿ ಮಾಡುವ ಮೂಲಕವೂ ಅವರು ಫೇಮಸ್‌ ಆಗಿದ್ದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

 

 

ಕೆಂಗೇರಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಜಗೋಪಾಲ್‌ ಅವರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕನ್ನಡದ ಹಲವು ಜನಪ್ರಿಯ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಕಡಿಮೆ ಆದ ಪರಿಣಾಮ ರಾಜಗೋಪಾಲ್‌ ತೆರೆಮರೆಗೆ ಸರಿದಿದ್ದರು.

Also Read  ಮಕ್ಕಳ ಆನ್ ಲೈನ್ ವಿದ್ಯಾಭ್ಯಾಸಕ್ಕೆಂದು ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಮಾರಿದ ತಂದೆ ➤ ನೆರವಿಗೆ ಮುಂದಾದ ರೀಲ್ ಲೈಫ್ ವಿಲನ್

 

error: Content is protected !!
Scroll to Top