ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ► 9ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.7, ಇಲ್ಲಿಯ ವೈಭವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಕಡಬ ಶಾಖೆಯು 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಇದರ ಪ್ರಯುಕ್ತ ಶಾಖೆಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.

 

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಥಮ ಶಾಖೆ ಕಡಬದಲ್ಲಿ ಪ್ರಾರಂಭಗೊಂಡು 8 ವರ್ಷಗಳನ್ನು ಪೂರೈಸಿ ಇದೀಗ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸಂಘದಲ್ಲಿ ಪೂಜಾಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ ರಾಮಕೃಷ್ಣ, ನಿರ್ದೇಶಕರಾದ ಮೋಹನ ಗೌಡ ಇಡ್ಯಡ್ಕ, ರಾಮಕೃಷ್ಣ ಕರ್ಮಲ, ಶಿವರಾಮ ಗೌಡ ಇಡ್ಯಪೆ, ನಾಗೇಶ್ ನಳಿಯಾರ್, ವೆಂಕಟ್ರಮಣ ಗೌಡ ಕರೆಂಕಿ, ನೇತ್ರಾವತಿ ಕೆ.ಪಿ ಗೌಡ, ರೇಖಾ ರಾಘವ ಗೌಡ, ಮಂಜುನಾಥ ಎನ್.ಎಸ್, ಮಾಜಿ ನಿರ್ದೇಶಕರಾದ ಚಂದ್ರಶೇಖರ ಗೌಡ ಬ್ರಂತೋಡು, ಲಿಂಗಪ್ಪ ಗೌಡ ಕಡೆಂಬಾಳ್, ಗೌರವ ಸಲಹೆಗಾರ ಈಶ್ವರ ಗೌಡ ಪಜ್ಜಡ್ಕ ಕಡಬ ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸಾಂತಪ್ಪ ಗೌಡ ಪಿಜಕ್ಕಳ, ಉಪಾಧ್ಯಕ್ಷರಾಗಿ ಜಿನ್ನಪ್ಪ ಗೌಡ ಮಳುವೇಲು ಸದಸ್ಯರಾದ ವಿಶ್ವನಾಥ ಗೌಡ ಇಡಾಲ, ಕುಂಞಣ್ಣ ಗೌಡ ಮಣಿಬಾಂಡ, ಸುದರ್ಶನ ಗೌಡ ಕೋಡಿಂಬಾಳ, ಧನಂಜಯ ಗೌಡ ಕೊಡಂಗೆ, ಬೆಳಿಯಪ್ಪ ಗೌಡ ಕಾರ್ಕಳ, ನೀಲಾವತಿ ಶಿವರಾಮ ಎಂ.ಎಸ್, ಕಮಲಾ ಶ್ರೀನಿವಾಸ್ ವಾಲ್ತಾಜೆ, ಗಣಪಯ್ಯ ಗೌಡ ಪಂಜೋಡಿ, ಗಣೇಶ್ ಗೌಡ ಮೂಜೂರು, ಶಿವಪ್ರಸಾದ್ ಗೌಡ ಕೈಕುರೆ, ರವೀಂದ್ರ ಗೌಡ ಕೆದ್ದೊಟ್ಟೆ, ಚಂದ್ರಶೇಖರ ಗೌಡ ಹಳೆನೂಜಿ, ಲಿಂಗಪ್ಪ ಗೌಡ ಕಾನದಬಾಗಿಲು ಒಕ್ಕಲಿಗ ಸೇವಾ ಸಂಘದ ಕಡಬ ವಲಯ ಅಧ್ಯಕ್ಷ ಚಂದ್ರಶೇಖರ ಕೋಡಿಬೈಲು, ಕಡಬ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜರ್ನಾಧನ ಗೌಡ ಪಣೆಮಜಲು, ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಶ್ರೀಧರ ಕಣಜಾಲು, ನೆಲ್ಯಾಡಿ ವಲಯ ಒಕ್ಕಲಿಗ ಸಂಘದ ಪ್ರೇರಕ ವಾಸುದೇವ ಗೌಡ ಬಾರ್ತಿಲ, ಕಡಬ ಟೀಚರ್ಸ್‌ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಕುಸುಮಾಧರ ಗೌಡ ಕೊಡಿಂಕಿರಿ, ದುರ್ಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸೋಮಪ್ಪ ನಾೖಕ್, ರಮ್ಯ ಸ್ಟುಡಿಯೋ ಮಾಲಕ ಶಿವರಾಮ ಗೌಡ, .ನಿವೃತ್ತ ಮುಖ್ಯೋಪಧ್ಯಾಯಿನಿ ರುಕ್ಮಿಣಿಸಾಂತಪ್ಪ ಗೌಡ, ರಮೇಶ್ ಗೌಡ ವಾಲ್ತಾಜೆ, ಜಯರಾಮ ಆರ್ತಿಲ, ಭಾಸ್ಕರ್ ರಾವ್ ಕೋಲ್ಪೆ,ಶಂಕರ್ ಭಟ್ ಪಟ್ರೋಡಿ,ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯ ಮಹಮ್ಮದ್ ಅಲಿ, ನಿವೃತ್ತ ಶಾಲಾ ಸಿಬ್ಬಂದಿ ಅಹ್ಮದ್ ಕುಂಞ, ಸ್ವಸ್ತಿಕ್ ಜುವ್ಯೆಲ್ಲರ್ಸ್‌ ಮಾಲಕ ಸುರೇಶ್ ಆಚಾರ್ಯ, ಗಣೇಶ್ ಕೋಲ್ಡ್‌ ಹೌಸ್ ಮಾಲಕ ನಾರಾಯಣ ಗೌಡ, ವಾರಿಜ ಟೆಕ್ಸ್‌ಟೈಲ್ ಮಾಲಕ ಚಂದ್ರಹಾಸ ರೈ, ಸ್ಫರ್ಶ ಮೊಬೈಲ್ಸ್‌ ಮಾಲಕ ನಿತ್ಯಾನಂದ, ವಕೀಲರಾದ ರಾಮಚಂದ್ರ ದೇರಾಜೆ, ವಿಜಿತ್ ಮಾಚಿಲ, ಜಯಪ್ರಕಾಶ್ , ಶಾಖಾ ಮೆನೇಜರ್ ಆಗಿ ಧರ್ಮರಾಜ್ ಕೆ, ಸುರೇಶ್ ಪಿ.ಎ, ಅಕೌಂಟೆಂಟ್ ವಿಜಯ ಕುಮಾರ್ ಎಂ, ಎಟೆಂಡರ್ ಹಾಗೂ ನಿತ್ಯನಿಧಿ ಸಂಗ್ರಾಹಕರಾಗಿ ಯಶೋಧರ ಗೌಡ ಪಿ, ಬೆಳಿಯಪ್ಪ ಗೌಡ ಬಿ, ಪ್ರಶಾಂತ್ ಗೌಡ ಕೆ, ಪುತ್ತೂರು ಶಾಲಾ ಮ್ಯಾನೇಜರ್ ಹೊನ್ನಪ್ಪ ಗೌಡ ಪಟ್ಟೆ, ಉಪ್ಪಿನಂಗಡಿ ಶಾಖಾ ಮ್ಯಾನೇಜರ್ ಸುಧಾಕರ್, ನೆಲ್ಯಾಡಿ ಶಾಲಾ ಮ್ಯಾನೇಜರ್ ಶಿವಪ್ರಸಾದ್, ಕುಂಬ್ರ ಶಾಖಾ ಮ್ಯಾನೇಜರ್ ದಿನೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಾಖಾ ಸಲಹಾ ಸಮಿತಿ ಅಧ್ಯಕ್ಷ ಸಾಂತಪ್ಪ ಗೌಡ ಸ್ವಾಗತಿಸಿ, ಕಡಬ ಶಾಖಾ ಮ್ಯಾನೇಜರ್ ಧರ್ಮರಾಜ್ ವಂದಿಸಿದರು.

error: Content is protected !!

Join the Group

Join WhatsApp Group