ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿಯ ಆಗಮನ ➤ ಹೆಣ್ಣು ಮರಿಗೆ ಜನ್ಮ ನೀಡಿದ ‘ಲಕ್ಷ್ಮೀ’



(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.01: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹೌದು ಮಂಜುನಾಥನ ಸನ್ನಿಧಿ ಗೆ ಇಂದು ಪುಟ್ಟ, ಪುಟ್ಟ ಹೆಜ್ಜೆಯನಿಟ್ಟು, ಮುದ್ದಾದ ಪುಟ್ಟ ಲಕ್ಷ್ಮೀ ಆಗಮಿಸಿದ್ದಾಳೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಹೆಸರಿನ ಆನೆ ಇಂದು ಮುಂಜಾನೆ ಹೆಣ್ಣು ಮರಿಗೆ ಜನ್ಮ ನೀಡಿದೆ.





 

ಮಾವುತರು ಆನೆ ಮರಿಗೆ ಉಪಚಾರ ನಡೆಸುತ್ತಿದ್ದು, ಆನೆ ಮರಿ ಆರೋಗ್ಯವಾಗಿದೆ ಎನ್ನಲಾಗಿದೆ. ಸಚಿವ ಆನಂದ್ ಸಿಂಗ್ ಅವರು ಧರ್ಮಸ್ಥಳಕ್ಕೆ ಈ ಆನೆಯನ್ನು ನೀಡಿದ್ದರು. ತುಂಟಾಟದಿಂದ ಧರ್ಮಸ್ಥಳದಲ್ಲಿ ಲಕ್ಷ್ಮೀ ಅಚ್ಚುಮೆಚ್ಚಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಪ್ರೀತಿ ಪಾತ್ರವಾಗಿತ್ತು. ವೀರೇಂದ್ರ ಹೆಗ್ಗಡೆಯವರು ಇಂದು ಆನೆ ಮರಿಯನ್ನು ವೀಕ್ಷಿಸಿ ಮುದ್ದಾಡಿದರು.






 

 

error: Content is protected !!
Scroll to Top