ತೆಂಕಿಲ : ಬೃಹತ್ ಗಾತ್ರದ ಮಾವಿನ ಮರ ಬಿದ್ದು ಅಪಾರ ಹಾನಿ

(ನ್ಯೂಸ್ ಕಡಬ) newskadaba.com ತೆಂಕಿಲ ,ಜೂ.30:  ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿ ಸೋಮವಾರ ಸಂಜೆ ವೇಳೆ ಭಾರಿ ಗಾತ್ರದ ಮಾವಿನ ಮರವೊಂದು  ಬುಡ ಸಹಿತ ಮುರಿದು ಬಿದ್ದು, ದೈವದ ಕಟ್ಟೆಯ ಕಾಂಪೌಂಡ್ ಹಾಗೂ ಮನೆಗೆ ಹಾನಿಯಾಗಿದ್ದು ಜೊತೆಗೆ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ಸೋಮವಾರದಂದು ನಡೆದಿದೆ.

ತೆಂಕಿಲ ಕೊಟ್ಟಿಬೆಟ್ಟು ಎಂಬಲ್ಲಿರುವ ಪುರುಷೋತ್ತಮ ನಾಯ್ಕ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಇವರ ಮನೆ ಬಳಿ ಕೊಟ್ಟಿಬೆಟ್ಟು ಕುಟುಂಬದ ತರವಾಡಿನ ಗುಳಿಗ ಹಾಗೂ ಬೈರವ ದೈವದ ಕಟ್ಟೆಯಿದೆ. ಅದರ ಹಿಂಭಾಗದಲ್ಲಿ ಸುಮಾರು 800 ವರ್ಷಗಳಷ್ಟು ಇತಿಹಾಸವಿರುವ ಬೃಹತ್ ಗಾತ್ರದ ಮಾವಿನ ಮರ ಬುಡ ಸಹಿತ ಮುರಿದು ಬಿದ್ದಿದೆ. ಇದರಿಂದಾಗಿ ದೈವದ ಕಾಂಪೌಂಡ್ ಗೆ ಹನಿಯಾಗಿದೆ. ಮನೆಯಂಗಳದಲ್ಲಿ ನಿಲ್ಲಿಸಿದ್ದ ಮಾರುತಿ ಎಸ್ಟೀಮ್ ಕಾರು ಸಂಪೂರ್ಣ ಜಖಂಗೊಂಡಿದೆ. ಮನೆಯ ಮಾಡು ಸೇರಿದಂತೆ .ಅಂಗಳಕ್ಕೆ ಅಳವಡಿಸಿದ್ದ ಶೀಟ್ ಛಾವಣಿಗಳಿಗೆ ಹಾನಿಯಾಗಿದೆ.

Also Read  ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು

error: Content is protected !!
Scroll to Top