ಕೊಂಬಾರು :ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ,ಜೂ.30:  ಕೊಂಬಾರು ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಆದಿತ್ಯವಾರದಂದು ನಡೆಯಿತು.

 

ಗ್ರಾಮ ಪಂಚಯತ್ ಅಧ್ಯಕ್ಷರಾದ ಅಜಿತ್ ಎಸ್.ರವರು ಕಟ್ಟಡ ಉದ್ಘಾಟಿಸಿದರು. ತಾ. ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಢಾರಿ, ಕಡಬ ಕ್ಷೇತ್ರದ ಜಿ. ಪಂ ಸದಸ್ಯ ಪಿ.ಪಿ ವರ್ಗೀಸ್, ಕೋ- ಆರ್ಡಿನೇಟರ್, ಕಟ್ಟಡ ನಿರ್ಮಾಣಕ್ಕೆ ಸಮಾಗ್ರಿ ಸರಬರಾಜುದಾರರು, ಗ್ರಾಮ ಪಂಚಾಯತ್ ಸದಸೈ, ನರೇಗಾ ಇಂಜಿನಿಯರ್, ಸದಸ್ಯರಾದ ಮಧುಸೂದನ್, ರಮೇಶ್, ಪುರುಷೋತ್ತಮ, ಲಲಿತ, ಸುಜಾತ, ದೇವಕಿ, ರುಕ್ಮಿಣಿ, ಕುಶಾಲಪ್ಪ ಗೌಡ ಸೇರಿದಂತೆ, ಗಾ. ಪಂ ಸಿಬ್ಬಂದಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Also Read  ಮೈಸೂರಿನಲ್ಲಿ ನಡೆದ ಭೀಕರ ಅಪಘಾತ ➤ಸಂಗನಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

 

error: Content is protected !!
Scroll to Top