SSLC ವಿದ್ಯಾರ್ಥಿನಿಯೋರ್ವಳಿಗೆ ಕೊರೊನಾ ದೃಢ

(ನ್ಯೂಸ್ ಕಡಬ) newskadaba.com ಕಾಪು,ಜೂ.28:  ಕಾಪು ತಾಲೂಕಿನ ಎಸ್‌ಎಸ್‌‌ಎಲ್‌‌ಸಿ ವಿದ್ಯಾರ್ಥಿನಿಯೋರ್ವಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ವಿದ್ಯಾರ್ಥಿನಿ ಜು.25ರ ಎಸ್‌.ಎಸ್‌.ಎಲ್‌.ಸಿಯ ಕನ್ನಡ ಹಾಗೂ ಜು.27ರಂದು ನಡೆದ ಗಣಿತ ಪರೀಕ್ಷೆ ಬರೆದಿದ್ದರು. ಜೂನ್‌‌ 27ರಂದು ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ಬಂದ ಹಿನ್ನೆಲೆ ಈಕೆಯನ್ನು ಕೂಡಾ ಅದೇ ದಿನ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.

ಕೊರೊನಾ ಪರೀಕ್ಷಾ ವರದಿ ಜೂ 28ರಂದು ಬಂದಿದ್ದು, ವರದಿಯಲ್ಲಿ ಪಾಸಿಟಿವ್‌ ಎಂದು ಖಚಿತವಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿನಿ ಜೂ29ರಂದು ನಡೆಯಲಿರುವ ಪರೀಕ್ಷೆಯ ಅವಕಾಶದಿಂದ ವಂಚಿತರಾಗಿದ್ದಾರೆ. ಈಕೆ ಪರೀಕ್ಷೆ ಬರೆದ ಕೇಂದ್ರದಲ್ಲಿ ಸ್ಯಾನಿಟೈಸ್‌‌‌‌‌‌‌ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Also Read  ಬೆಳ್ತಂಗಡಿ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಕೊರೊನಾಗೆ ಪತಿಯೂ ಬಲಿ

 

error: Content is protected !!
Scroll to Top