ನಾಡಹಬ್ಬ ‘ದಸರಾ’ ಆಚರಣೆ ಮೇಲೂ ಕೊರೋನಾ ಕರಿ ನೆರಳು!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜೂ.27:  ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮೇಲೂ ಕೊರೋನಾ ವೈರಸ್ ಕರಿ ಛಾಯೆ ಬಿದ್ದಿದ್ದು, ಈ ಬಾರಿ ಮೈಸೂರು ದಸರಾ ಒಡಿಶಾದಲ್ಲಿ ನಡೆದ ಪೂರಿ ಜಗನ್ನಾಥ ರಥಯಾತ್ರೆಯಂತೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಹಬ್ಬ ಹಾಗೂ ಸಂಪ್ರದಾಯಗಳನ್ನು ಮುಂದುವರೆಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಸೋಂಕು ಪೀಡಿತರ ಸಂಕ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುವುದು ಕಷ್ಟಸಾಧ್ಯ. ಹೀಗಾಗಿ ಪೂರಿ ರಥಯಾತ್ರೆಯಂತೆಯೇ ದಸಾರವನ್ನು ಆಚರಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ.ಇನ್ನು ದಸರಾ ಹಬ್ಬ ಆಚರಣೆ ವೇಳೆ ಪಾಲ್ಗೊಳ್ಳುವ ಆನೆಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆಂದಿದ್ದಾರೆ. ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವುದು ಹಾಗೂ ಇನ್ನಿತರೆ ನಿರ್ಧಾರಗಳ ಕುರಿತು ಅಧಿಕಾರಿಗಳ ನಿರ್ಧರಿಸಲಿದ್ದಾರೆಂದು ತಿಳಿಸಿದ್ದಾರೆ.

Also Read  5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!!

 

error: Content is protected !!
Scroll to Top