SSLC ಪರೀಕ್ಷೆ ➤ ಬೋಟ್‌ನಲ್ಲಿ ಬಂದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.27:  ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಆದ್ರೇ ಕೆಲವೆಡೆ ಪರೀಕ್ಷಾ ಕೆಂದ್ರಗಳನ್ನ ತಲುಪುವುದೆ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಕೊರೊನಾ ಕಾರಣದಿಂದಾಗಿ ಬೆಂಗ್ರೆ ಪ್ರದೇಶದಿಂದ ಬೋಟ್‌ಗಳನ್ನು ಬಂದ್‌ ಮಾಡಲಾಗಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರಸ್ತೆ ಮಾರ್ಗವಾಗಿ ಸುತ್ತು ಬಳಸಿ ಬರಬೇಕಾಗಿತ್ತು.

 

ಅದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಬೋಟ್‌ ಪ್ರಯಾಣ ಆರಂಭಿಸಲಾಗಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸಲು ದ್ವೀಪ ಪ್ರದೇಶವಾಗಿರುವ ತೋಟಬೆಂಗ್ರೆಯ 15 ಕ್ಕೂ ಅಧಿಕ ವಿದ್ಯಾರ್ಥಿಗಳು ಬೋಟ್‌ನಲ್ಲಿ ಪ್ರಯಾಣ ಮಾಡಿ ನಗರಕ್ಕೆ ಆಗಮಿಸಿದ್ದಾರೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜೂನ್‌ 25 ಕ್ಕೆ ಆರಂಭವಾಗಿದ್ದು ತೋಟಬೆಂಗ್ರೆ ವಿದ್ಯಾರ್ಥಿಗಳು ರಸ್ತೆ ಮಾರ್ಗವಾಗಿ ಸಂಚರಿಸಿ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಲುಪಲು ಕಷ್ಟವಾಗುವ ಕಾರಣದಿಂದ ಟ್ರಾಲ್ ಬೋಟ್‌ನಲ್ಲಿ ವಿದ್ಯಾರ್ಥಿಗಳು ತೋಟಬೆಂಗ್ರೆಯಿಂದ ಬಂದರುಗೆ ಬೋಟ್ ಪ್ರಯಾಣ ಮಾಡಿದ್ದು ಬೋಟ್ ಪ್ರಯಾಣದ ಬಳಿಕ ಆಟೋ ರಿಕ್ಷಾ ಮೂಲಕ ಪರೀಕ್ಷಾ ಕೇಂದ್ರಗಳಿಗೆ ತೆರಳಲಿದ್ದಾರೆ.

Also Read  ತಂದೆಯಿಂದಲೇ ಅತ್ಯಾಚಾರ- ಅಪ್ರಾಪ್ತೆ ಗರ್ಭಿಣಿ ಪೋಕ್ಸೋ ಪ್ರಕರಣ ದಾಖಲು

 

error: Content is protected !!
Scroll to Top