ಶಾಂತಿಮೊಗರು: ನೀರುಪಾಲಾದ ಸಹೋದರರು ► ಓರ್ವನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಇಲ್ಲಿಗೆ ಸಮೀಪದ ಕುಟ್ರುಪ್ಪಾಡಿ ಗ್ರಾಮದ ಕುಮಾರಧಾರಾ ನದಿಯಲ್ಲಿ ಮಂಗಳವಾರ ಸಂಜೆ ನೀರುಪಾಲಾದ ಯುವಕರಿಬ್ಬರ ಪೈಕಿ ಓರ್ವನ ಶವ ಬುಧವಾರ ಪತ್ತೆಯಾಗಿದೆ.  ಇನ್ನೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಿದೆ.

ಕುಟ್ರುಪ್ಪಾಡಿ ಗ್ರಾಮದ ಅಲರ್ಮೆ ದಿ. ಚೆನ್ನಪ್ಪ ಪೂಜಾರಿಯವರ ಪುತ್ರರಾದ ಹರಿಪ್ರಸಾದ್(30) ಹಾಗೂ ಸತ್ಯಪ್ರಸಾದ್(25) ನೀರುಪಾಲಾದವರು. ಜೊತೆಗಿದ್ದ ಅವರ ಚಿಕ್ಕಪ್ಪನ ಮಗ ರೋಹಿತ್ ಬದುಕುಳಿದಿದ್ದಾರೆ.


ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಬಳಿ ಸ್ನಾನಕ್ಕೆಂದು ಮೂವರು ನದಿಗಿಳಿದಿದ್ದು ನೀರಿನ ಸೆಳತಕ್ಕೆ ಕೊಚ್ಚಿಹೋಗಿದ್ದಾರೆ. ಸ್ಥಳಿಯ ಈಜು ಪರಿಣತರು, ಅಗ್ನಿಶಾಮಕ ದಳ ಸಿಬ್ಬಂದಿ ನೀರುಪಾಲದವರ ಪತ್ತೆಗಾಗಿ ರಾತ್ರವರೆಗೆ ಶ್ರಮಿಸಿದ್ದರು.

Also Read  ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ಹರಿಪ್ರಸಾದ್ ಕಡಬದಲ್ಲಿ ಟೈಲರ್ ವೃತ್ತಿಯೊಂದಿಗೆ, ರಾತ್ರಿ ಪಾಳಿಯಲ್ಲಿ ಬಿಎಸ್ಎನ್ಎಲ್ ಎಕ್ಸ್‌ಚೇಂಜ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹರಿಪ್ರಸಾದ್ ವಿವಾಹಿತರಾಗಿದ್ದು, ಇವರ ಪತ್ನಿ ಕಡಬ ಗ್ರಾಮ ಕರಣಿಕರ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರುವರೆ ವರ್ಷದ ಪುತ್ರನಿದ್ದಾನೆ. ಸತ್ಯಪ್ರಸಾದ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಸೋಮವಾರ ಆಗಮಿಸಿ ಬಳಿಕ ಬುಧವಾರ ವಾಪಸ್ಸಾಗುವರಿದ್ದರು.

error: Content is protected !!
Scroll to Top