ಇಂದಿನಿಂದ ಬಿ.ಸಿ.ರೋಡ್ – ಜಕ್ರಿಬೆಟ್ಟು ವಾಹನ ಸಂಚಾರ ನಿಷೇದ -ಡಿ ಸಿ ಆದೇಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ 26. ಬಿ.ಸಿ. ರೋಡ್ಜಕ್ರಿಬೆಟ್ಟು ಹೆದ್ದಾರಿಯ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರ್ಣಗೊಳಿಸಲೆಂದು 23 ದಿನಗಳ ಕಾಲ ಅಂದರೆ ಇಂದಿನಿಂದ ಜು.28 ವರೆಗೆ ಎಲ್ಲಾ ವಿಧದ ವಾಹನ ಸಂಚಾರ ನಿಷೇಧಿಸಿ . ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.

 

ಸಂಚಾರ ನಿಷೇಧದ ಹಿನ್ನಲೆಯಲ್ಲಿ ಮಂಗಳೂರುಪುಂಜಾಲಕಟ್ಟೆ ಕಡೆ ಓಡಾಡುವ ಲಘು ವಾಹನಗಳಾದ ಕಾರು ಜೀಪು , ಮಿನಿ ವ್ಯಾನ್ ದ್ವಿಚಕ್ರವಾಹನ , ಅಂಬ್ಯುಲೆನ್ಸ್ ವಾಹನಗಳು ಬದಲಿ ರಸ್ತೆಯಾದ ಮಂಗಳೂರು, ಬಿ.ಸಿ ರೋಡು, ಬಂಟ್ವಾಳ ಪೇಟೆಜಕ್ರಿಬೆಟ್ಟು ಬಳಸುವಂತೆ ಹಾಗೂ ಮೂಡುಬಿದ್ರೆ ಬಂಟ್ವಾಳ ಬಿ.ಸಿ ರೋಡ್ ಕಡೆಗೆ ಸಂಚರಿಸುವ ವಾಹನ ಬದಲಿ ರಸ್ತೆಯಾದ ಮೂಡುಬಿದ್ರೆ ಬಂಟ್ವಾಳ ಜಂಕ್ಷನ್ ರಾ. ಹೆ -234 ಮುಖಾಂತರ ಜಕ್ರಿಬೆಟ್ಟುಬಂಟ್ವಾಳ ಪೇಟೆಬಿ.ಸಿ ರೋಡ್ ಕಡೆಗೆ ಚಲಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ.

Also Read  ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ಮುಸುಕುದಾರಿಗಳು - ತಾಯಿ ಮಗಳನ್ನು ಬೆದರಿಸಿ ನಗ-ನಗದು ದರೋಡೆ

ಇನ್ನು ಮಂಗಳೂರುಗುರುವಾಯನಕೆರೆ ಕಡೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ದಿನನಿತ್ಯ ಸಂಚರಿಸುವ ಸಾರ್ವಜನಿಕ ಬಸ್ಸುಗಳಿಗೆ ರಾಷ್ಟ್ರೀಯ ಹೆದ್ದಾರಿ 234 ಬಳಸುವಂತೆ, ಅಂದರೆ ಮಂಗಳೂರುಬಿ.ಸಿ ರೋಡ್ ಉಪ್ಪಿನಂಗಡಿ ಮುಖಾಂತರ ಕರಾಯ ಕಲ್ಲೇರಿ ಗುರುವಾಯನಕೆರೆ ಬದಲಿ ಮಾರ್ಗ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿಗೆ ಬರುವ ಬಸ್ಸುಗಳು ಗುರುವಾಯನಕೆರೆ ಮುಖಾಂತರ ಕಲ್ಲೇರಿಕರಾಯ ಉಪ್ಪಿನಂಗಡಿ ಮಾಣಿ ಬಿ.ಸಿ ರೋಡ್ ಮಂಗಳೂರು ಬಳಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದಲ್ಲದೆ ಟ್ಯಾಂಕರ್ಸ್ , ಶಿಪ್ ಕಾರ್ಗೋ ಕಂಟೆನರ್ಸ್ , ಹೆವಿ ಕಮರ್ಷಿಯಲ್ ವೆಹಿಕಲ್ ಮಲ್ಟಿ ಎಕ್ಸೆಲ್ ಟ್ರಕ್ಸ್, ರಾಜಹಂಸ ಮುಂತಾದ ಘನ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕಾಂಕ್ರೀಟಿಕರಣ ಕಾಮಗಾರಿ ಪೂರ್ಣಗೊಳಿಸಲು ಸಮಯಾವಕಾಶ ಬೇಕಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ .. ಜಿಲ್ಲಾಧಿಕಾರಿಗೆ ಸಂಚಾರ ನಿಷೇಧಿಸುವಂತೆ ಮನವಿ ಸಲ್ಲಿಸಿ ಪತ್ರ ಸಲ್ಲಿಸಿತ್ತು.

Also Read  ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತರಿಗೆ ಸನ್ಮಾನ

error: Content is protected !!
Scroll to Top