ಮಂಗಳೂರು: ಬೀದಿ ನಾಯಿಗಳಿಂದ ಜಿಂಕೆಗಳ ಹಿಂಡಿನ ಮೇಲೆ ದಾಳಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ 26. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಬೀದಿನಾಯಿಗಳ ಹಿಂಡು ಜಿಂಕೆಗಳ ಮೇಲೆ ದಾಳಿ ಮಾಡಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಜಿಂಕೆಗಳ ಮಾರಣಹೋಮ ನಡೆದಿದೆ.

 

ಉದ್ಯಾನವನದ ಬೇಲಿ ಹಾರಿ ಜಿಂಕೆಗಳ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಜಿಂಕೆಗಳು ಸಾವನ್ನಪ್ಪಿದ್ದು, ಇನ್ನು 5ಕ್ಕೂ ಹೆಚ್ಚಿನ ಜಿಂಕೆಗಳು ಗಂಭೀರವಾಗಿ ಗಾಯಗೊಂಡಿದೆ. ಬೀದಿ ನಾಯಿಗಳ ದಾಳಿಗೆ ಸಿಲುಕಿ ಇಷ್ಟೊಂದು ಪ್ರಮಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮದಲ್ಲೇ ಜಿಂಕೆಗಳಿಗೆ ರಕ್ಷಣೆ ಇಲ್ಲವಾಗಿದ್ದು, ಜಿಂಕೆಗಳ ಮಾರಣಹೋಮಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಬಗ್ಗೆ ಪ್ರತಿಕ್ರಿಯಿಸಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್, ನಾವು ಹಿಂದೆಯೇ ಜಿಂಕೆಗಳನ್ನು ಕಾಡಿಗೆ ಬಿಡಲು ಚಿಂತನೆ ನಡೆಸಿದ್ದೆವು. ಆದರೆ ನಿನ್ನೆ ರಾತ್ರಿ ಬೀದಿನಾಯಿಗಳ ದಾಳಿಗೆ ಜಿಂಕೆಗಳು ಬಲಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Also Read  ಸುಳ್ಯ ಪೊಲೀಸ್ ಉಪನಿರೀಕ್ಷರಾಗಿ ಈರಯ್ಯ ದೂಂತುರು ಆಯ್ಕೆ

error: Content is protected !!
Scroll to Top