ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಓಣಂ ಆಚರಣೆ ► ಮೆರುಗು ನೀಡಿದ ಪೂಕಳಂ, ತಿರುವಾದಿರ ನೃತ್ಯ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಇಲ್ಲಿನ ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆ ಮತ್ತು ಪದವಿ ವಿದ್ಯಾಲಯ ಜಂಟಿ ಆಶ್ರಯದಲ್ಲಿ ಓಣಂ ಆಚರಣೆಯನ್ನು  ಸೋಮವಾರ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂತೂರು ಮಾರ್ ಇವಾನಿಯೋಸ್ ವಿದ್ಯಾ ಸಂಸ್ಥೆಯ ಪ್ರಿನ್ಸಿಪಾಲ್ ಫಿಲಿಪ್ ನೆಲ್ಲಿವಿಲ ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಗಳನ್ನು ಎಲ್ಲರೂ ಒಟ್ಟು ಸೇರಿ ಆಚರಣೆ ಮಾಡುವುದರಿಂದ, ಸೌಹಾರ್ದತೆ ಹಾಗೂ ಐಕ್ಯತೆ ಮೂಡುತ್ತದೆ. ಪ್ರತಿಯೊಂದು ಹಬ್ಬ ಆಚರಣೆಗಳಲ್ಲೂ ಆದರದ್ದೇ ಆದ ವೈಶಿಷ್ಠತೆಗಳಿವೆ. ಕೇರಳದ ನಾಡ ಹಬ್ಬವಾದ ಓಣಂ ನ್ನು ವಿಶ್ವದ ಎಲ್ಲೆಡೆಯಲ್ಲಿಯೂ ಎಲ್ಲಾ ವರ್ಗದ ಮಂದಿಯೂ ಆಚರಿಸುವ ಮೂಲಕ ಅದು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ, ಓಣಂ ಹಬ್ಬ ಎಲ್ಲರ ಮನ, ಮನೆ ಬೆಳಗಲಿ ಎಂದು ಹಾರೈಸಿದರು.

Also Read  ದೇಗುಲದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ.!

ಪುತ್ತೂರು ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸಿದ್ದಿಕ್ ನೀರಾಜೆ ಮಾತನಾಡಿ ಕಾಲೇಜುಗಳಲ್ಲಿ ಹಬ್ಬ ಆಚರಿಸುವ ಮೂಲಕ ಮಕ್ಕಳಲ್ಲಿ ಹಬ್ಬಗಳ ಆಚರಣೆಯ ಹಿಂದೆ ಇರುವ ವಿಶಿಷ್ಠತೆಗಳನ್ನು ತಿಳಿಸಲು ಸಾಧ್ಯ ಆಗುತ್ತದೆ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡುತ್ತದೆ ಇದೊಂದು ಒಳ್ಳೆಯ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರುಗಳಾದ ಹರೀಶ್, ಅಜಿತ್ ಕಾಮತ್, ಸಿಂಥ್ಯಾ ಉಪಸ್ಥಿತರಿದ್ದರು. ರೋಶ್ನಿ ಸ್ವಾಗತಿಸಿದರು. ಸಫ್ರಿನಾ ವಂದಿಸಿದರು.


 ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಪುಕಳಂ, ತಿರುವಾದಿರ ಮೆರಗು:

ಓಣಂ ಆಚರಣೆಯ ಸಂಭ್ರದಲ್ಲಿದ್ದ ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗಿನಿಂದಲೇ ಕೇರಳ ಶೈಲಿಯ ಬಟ್ಟೆ ತೊಟ್ಟು ಬಂದು ಪುಕಳಂ ಬಿಡಿಸಿ, ಓಣಂ ಹಾಡು, ತಿರುವಾದಿರ (ನೃತ್ಯ), ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ತೊಡಗಿಸಿಕೊಂಡು ದಿನ ಇಡೀ ಹಬ್ಬದ ಸಂಭ್ರಮದಲ್ಲಿ ಮೆರೆದರು. ಮಧ್ಯಾಹ್ನ ಸಾಮೂಹಿಕ ಓಣಂ ಖಾದ್ಯಗಳನ್ನೊಳಗೊಂಡ ಸಾಮೂಹಿಕ ಭೋಜನೆ ಕಾರ್ಯ ನಡೆಯಿತು.

Also Read  ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

 

error: Content is protected !!
Scroll to Top