ಮಂಗಳೂರು: ಭವಿಷ್ಯದಲ್ಲಿಉದ್ಯೋಗಕ್ಕೆ ಹಲವಾರು ಅವಕಾ±ಗಳಿರುವ ರೋಬೊಟಿಕ್ಸ್ ಆ್ಯಂಡ್ ಮಿಷನ್ ಲರ್ನಿಂಗ್‍ನ ಕುರಿತು ಉಚಿತ ಅಂತರಾಷ್ಟ್ರೀಯ ವೆಬಿನಾರ್ ವು ಜೂನ್ 26 ರಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ ಪ್ರತಿಷ್ಟಿತ ಶ್ರೀನಿವಾಸ ವಿಶ್ವವಿದ್ಯಾಲಯವು ಈ ವಿಭಿನ್ನ ಅಂತರಾಷ್ಟ್ರೀಯ ವೆಬ್‍ನಾರ್‍ನ್ನು ಆಯೋಜಿಸುತ್ತಿದೆ. ಝೂಮ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು.
ಹೆಸರಾಂತ ರೋಬೊಟಿಕ್ಸ್ ವಿಜ್ಞಾನಿ ಕನ್ನಡಿಗ ಹರ್ಷ ಕಿಕ್ಕೇರಿ ಅವರು ವೆಬಿನಾರ್ ನಡೆಸಿಕೊಡಲಿದ್ದಾರೆ. ರೋಬೊಟಿಕ್ಸ್ ತಂತ್ರಜ್ಞಾನದಲ್ಲಿ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಹರ್ಷ ಕಿಕ್ಕೇರಿ ಅವರು ಮಹಾನ್ ಸಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪ್ರಶಂಶಿಸಿದ್ದಾರೆ. ಪ್ರಸ್ತುತ ಸಿಂಗಾಪುರದ ಹೊಲೊಸೂಟ್ ಸಂಸ್ಥೆಯ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷಕಿಕ್ಕೇರಿ ಅವರು ವೆಬಿನಾರ್‍ನಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲಕರವಾದ ಮಾಹಿತಿಯನ್ನುಒದಗಿಸಲಿದ್ದಾರೆ.
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೆಬಿನಾರ್ ಹೆಚ್ಚು ಉಪಯುಕ್ತವಾಗಲಿದೆ. ಜೂನ್ 26ರಂದು ಸಂಜೆ 6.30ಕ್ಕೆ ವೆಬಿನಾರ್ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಜೂನ್ 26 ರ ಸಂಜೆ 4 ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ವಿಶೇಷ ಉಡುಗೊರೆಯನ್ನು ನೀಡಲಾಗುತ್ತದೆ. 1 ಗಂಟೆಗಳ ಕಾಲ ನಡೆಯಲಿರುವ ವೆಬಿನಾರ್‍ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಪ. ಅಂಕಿತ್‍ಜೆ.
ಡೆಪ್ಯೂಟಿ ರಿಜಿಸ್ಟ್ರಾರ್
ಶ್ರೀನಿವಾಸ ವಿಶ್ವಿದ್ಯಾಲಯ
+91 9741141433