ದಿನಾಂಕ:25-06-2020 ರಂದು ಜಿಲ್ಲಾ ಗೃಹರಕ್ಷಕ ದಳದ ಮಂಗಳೂರು ಘಟಕದ ಗೃಹರಕ್ಷಕರಿಗೆ ಆಯುಷ್ ಇಲಾಖೆಯಿಂದ ಕೋವಿಡ್-19 ರೋಗನಿರೋಧಕ ಮಾತ್ರೆಗಳನ್ನು ಮತ್ತು ಗಿಡಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹಾಜರಿದ್ದ ವೈದ್ಯಾಧಿಕಾರಿಗಳು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಈ ಮಾತ್ರೆಗಳಿಂದ ಕೊರೋನಾ ವೈರಸ್‍ನಿಂದ ನಮಗೆ ರಕ್ಷಣೆಯನ್ನು ನೀಡುವ ಉದ್ದೇಶದಿಂದ ಇದನ್ನು ವಿತರಿಸಲಾಗಿದೆ. ಗೃಹರಕ್ಷಕರೆಲ್ಲ ಕೊರೋನಾ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಸಮಾಜವನ್ನು ರಕ್ಷಿಸುವ ಜವಾಬ್ದಾರಿಯ ಕರ್ತವ್ಯ ನಿಮ್ಮದಾಗಿರುತ್ತದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಮಾತನಾಡಿ ಜಿಲ್ಲೆಯ ಗೃಹರಕ್ಷಕರ ಮೇಲಿನ ಕಾಳಜಿಯಿಂದ ಸರ್ಕಾರದ ವತಿಯಿಂದ ಉಚಿತವಾಗಿ ಔಷಧವನ್ನು ಕೊಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಗೃಹರಕ್ಷಕರೆಲ್ಲಾ ಕರ್ತವ್ಯದ ಸಮಯದಲ್ಲಿ ಮುಖಕವಚ ಮತ್ತು ಸ್ಯಾನಿಟೈಸರ್‍ನ್ನು ಕಡ್ಡಾಯವಾಗಿ ಬಳಸಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಗೃಹರಕ್ಷಕರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ|| ಹೇಮವಾಣಿ, ಡಾ|| ಕೃಷ್ಣಪ್ರಸಾದ್, ವೈದ್ಯಾಧಿಕಾರಿಗಳು ಸರ್ಕಾರಿ ಆಯುರ್ವೇದಿಕ್ ಔಷಧಾಲಯ, ತನ್ನೀರುಪಂತ, ಬೆಳ್ತಂಗಡಿ, ಡಾ|| ಪ್ರವೀಣ್ ಕುಮಾರ್ ರೈ, ಅಧ್ಯಕ್ಷರು, Iಊಒಂ ಮಂಗಳೂರು, ಡಾ|| ಪ್ರವೀಣ್‍ರಾಜ್, ಪ್ರಾಂಶುಪಾಲರು, ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು, ಮೂಡಬಿದ್ರಿ, ಡಾ|| ಪ್ರಸನ್ನ ಕುಮಾರ್, ಹೋಮಿಯೋಪಥಿಕ್ ಕನ್ಸಲ್ಟೆಂಟ್, ಸದಸ್ಯರು Iಊಒಂ ಮಂಗಳೂರು ಹಾಗೂ ಮಂಗಳೂರು ಘಟಕದ ಎಲ್ಲಾ ಗೃಹರ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.