ಡಿವೈಡರ್ ಮೇಲೇರಿದ ಗ್ಯಾಸ್ ಸಿಲಿಂಡರ್ ಸಾಗಟದ ಲಾರಿ ➤ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಪಡುಬಿದ್ರಿ,ಜೂ.25:  ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಯೊಂದು ಡಿವೈಡರ್ ಮೇಲೇರಿದ ಘಟನೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

 

ಬುಧವಾರ ತಡರಾತ್ರಿ ಶಿವಮೊಗ್ಗದಿಂದ ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಮಂಗಳೂರಿನತ್ತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಲಿಸುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು, ಪಡುಬಿದ್ರಿ ಪ್ರಗತಿ ಕಾಂಪ್ಲೆಕ್ಸ್ ಸಮೀಪದ ಹೆದ್ದಾರಿ ಹಾಗು ಸರ್ವೀಸ್ ರಸ್ತೆ ಮಧ್ಯೆ ಹಾಕಲಾದ ಡಿವೈಡರ್ ಮೇಲೇರಿ ನಿಂತಿದೆ.ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ವಿಭಜಕದಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಚಾಲಕ ಶ್ರೀಧರ್ ದೂರಿದ್ದಾರೆ.

Also Read  ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಆಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನಿರಾಕರಿಸುವಂತಿಲ್ಲ- ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

 

error: Content is protected !!
Scroll to Top