ಕಡಬ ಸರಸ್ವತೀ ವಿದ್ಯಾಲಯ ಶಿಕ್ಷಕರ ದಿನಾಚರಣೆ ►“ಸಾಧನಶ್ರೀ” ಪ್ರಶಸ್ತಿ ಪಡೆದ ಸಾಧಕರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.6, ಕಡಬ ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೂ ನೀಡಿ ಗೌರವಾರ್ಪಣೆ ಮಾಡಿ ಆಶೀರ್ವಾದ ಪಡೆಯುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ “ಸಾಧನಶ್ರೀ” ಪ್ರಶಸ್ತಿ ಪಡೆದ ಕದಂಬ ಜೆ.ಸಿ.ಐ ಕಡಬ ಪೂರ್ವಾಧ್ಯಕ್ಷ  ಹಾಗೂ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ  ಶಿವಪ್ರಸಾದ್ ಮೈಲೇರಿಯವರನ್ನು ಶಿಕ್ಷಕರ ವತಿಯಿಂದ ಶಾಲಾ ಮುಖ್ಯ ಶಿಕ್ಷಕ  ಮಾಧವ ಕೋಲ್ಪೆ  ಅವರು  ಗೌರವಿಸಿದರು.

Also Read  ಪಾಕ್‌ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಉಗ್ರ ಸಂಘಟನೆ ಮುಖ್ಯಸ್ಥನ ವಿರುದ್ಧ ಎಫ್ ಐಆರ್

ಶಿವಪ್ರಸಾದ್ ಮೈಲೇರಿಯವರು ಅಭಿನಂದನೆಯನ್ನು ಸ್ವೀಕರಿಸಿ, ಕೃತಜ್ಞತೆಯನ್ನು ಸಲ್ಲಿಸಿದರು.  ಭಾರತೀ ಶಿಶುಮಂದಿರ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕರಿಗೆ ಆಟೋಟ ಸ್ಪರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿನಿಯರಾದ  ವೀಕ್ಷಾ.ಡಿ ಸ್ವಾಗತಿಸಿ,  ಜಸ್ಮಿತ್  ವಂದಿಸಿದರು.

error: Content is protected !!
Scroll to Top