ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಆರೋಗ್ಯದಲ್ಲಿ ಏರುಪೇರು ವೇಳೆ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜೂ.25: ಎಸ್.ಎಸ್.ಎಲ್. ಸಿ. ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಓರ್ವಳು ಪರೀಕ್ಷಾ ಕೇಂದ್ರದಲ್ಲಿ ವಾಂತಿ ಮಾಡಿದ ಘಟನೆ ಬಿ.ಸಿ ರೋಡ್ ನ ಶಾಲೆಯೊಂದರಲ್ಲಿ ನಡೆದಿದೆ.

ಪರೀಕ್ಷೆ ಬರೆಯಲು ಆರಂಭವಾದ ಬಳಿಕ ಏಕಾಏಕಿ ವಾಂತಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ವಿಶ್ರಾಂತಿ ಕೊಠಡಿಗೆ ಕಳುಹಿಸಲಾಯಿತು. ಕೂಡಲೇ ಸ್ಥಳಕ್ಕೆ ಬಂಟ್ವಾಳ ವೈದ್ಯಾಧಿಕಾರಿ ಭೇಟಿ ನೀಡಿ ಪರೀಕ್ಷೆ ನಡೆಸುತ್ತಿದ್ದಾರೆ.

ಪರೀಕ್ಷೆ ನಡೆಸಿದ ಬಳಿಕ ಯಾವುದೇ ತೊಂದರೆಯಿಲ್ಲದಿದ್ದರೆ ಅವರನ್ನು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಅಂತಹ ತೊಂದರೆಗಳು ಏನಾದರೂ ಇದ್ದಲ್ಲಿ ವಿಶ್ರಾಂತಿ ನೀಡಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ.

Also Read  ಕರಾವಳಿಯಲ್ಲಿ ಭಾರೀ ಗಾಳಿ - ಮಳೆಯಾಗುತ್ತಿರುವ ಹಿನ್ನೆಲೆ | ತುರ್ತು ಕ್ರಮಗಳಿಗಾಗಿ ಈ ಕ್ರಮಗಳನ್ನು ಅನುಸರಿಸಿ

error: Content is protected !!
Scroll to Top