(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.25: ಕೋವಿಡ್ 19 ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಲುವಾಗಿ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆಯು ಸದ್ಯದ ಮಟ್ಟಿಗೆ ಪಾಠದ ಬದಲು ಪಾಕಶಾಲೆಯಾಗಿ ಬದಲಾಗಿದೆ. ವಿದ್ಯಾಲಯದ ಬೋದಕ ಹಾಗೂ ಬೋಧಕೇತರ ವರ್ಗದಿಮದ ಆಹಾರೋತ್ಪನ್ನಗಳನ್ನು ತಯಾರಿಸುವ ಪ್ರಯತ್ನ ಆರಂಭಗೊಂಡಿದ್ದು, ಬದುಕಿನ ಪಾಠಕ್ಕೆ ವಿದ್ಯಾಲಯ ಸಾಕ್ಷಿಯಾಗಿದೆ. ಕೋವಿಡ್ -19 ಪರಿಣಾಮ ಈ ವರ್ಷ ವಿದ್ಯಾಲಯದ ಪ್ರವೇಶಾತಿ ಆರಂಭಗೊಂಡಿಲ್ಲ. ಇದರಿಂದ ಎಲ್ಲ ಶಾಳಾ ಕಾಲೇಜುಗಳಳತೆ ಅಂಬಿಕಾ ವಿದ್ಯಾಲಯವೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದರೆ ಪುತ್ತೂರಿನ ಅಂಬಿಕಾ ವಿದ್ಯಾಲಯವು “ಶಿವಂ ಪುಡ್ ಫ್ರಾಡಕ್ಟ್” ಆರಂಭದ ಮೂಲಕ ಬದುಕು ಕಲ್ಪಿಸಿದೆ.
ಉಪಾನ್ಯಾಸಕ ಸತೀಶ್ ನೇತೃತ್ವದಲ್ಲಿ ಸಿಬ್ಬಂದಿ ಸಣ್ಣ ಪ್ರಮಾಣದ ಆಹಾರ ಉದ್ಯಮ ಆರಂಭಿಸಿದ್ದಾರೆ. ಮೊದಲ ದಿನವಾದ ಜೂನ್ 22 ರಂಧು ಹಲಸಿನ ಸೋಲೆಯ ಚಿಪ್ಸ್ ತಯಾರಿಸಿದ್ದಾರೆ. ಇದರಲ್ಲಿ ಬರುವ ಆದಾಯವನ್ನು ತಮ್ಮೊಳಗೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಆಡಳಿತ ಮಂಡಳಿಯು ಸಿಬ್ಬಂದಿಯ ವಿನೂತನ ಪ್ರಯತ್ನಕ್ಕೆ ಅಗತ್ಯ ನೆರವು ಒದಗಿಸಿದೆ. ಶೀಘ್ರವೇ ಆನ್ಲೈನ್ ಖರೀದಿ ಹಾಗೂ ಹೋಂ ಡೆಲಿವರಿ ಆರಂಭಿಸುತ್ತೇವೆ ಎಂದು ಉಪಾನ್ಯಾಸಕ ಸತೀಶ್ ಕೆ ತಿಳಿಸಿದ್ದಾರೆ.