ಮಂಗಳೂರು : ಮ್ಯಾನ್ ಹೋಲ್ ಗೆ ಇಳಿದ ಕಾರ್ಪೋರೇಟರ್

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ.25: ಚರಂಡಿ ನೀರು ಬ್ಲಾಕ್ ಆಗಿದ್ದನ್ನು ಸರಿ ಪಡಿಸಲು ಖುದ್ದು ಕಾರ್ಪೋರೇಟರ್ ಮ್ಯಾನ್ ಹೋಲ್ ಗೆ ಇಳಿದ ಘಟನೆ ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿ ನಡೆದಿದೆ. ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾದಾಗ ಸಮಸ್ಯೆ ಏನೆಂಬುದು ತಿಳಿಯಲು, ಪಕ್ಕದಲ್ಲಿ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆ ಹರಿಸಲು ಒಪ್ಪಲಿಲ್ಲ.

ಈ ಸಂದರ್ಭದಲ್ಲಿ ಸ್ವತಃ ಕದ್ರಿಯ ಕಾರ್ಪೊರೇಟರ್, ಕದ್ರಿ ಮನೋಹರ್ ಶೆಟ್ಟಿಯವರು ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ತಿಳಿಸಿದರು. ಆದ್ರೂ ಕೂಡ ಅವರು ಕಾರ್ಮಿಕರು ತೊಡಕು ಸರಿಪಡಿಸಲು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಒಂದು ಬದಲಿ ಬಟ್ಟೆ ತರಿಸಿ ಧರಿಸಿ ಚೇಂಬರ್ ಒಳಗಡೆ ಇಳಿದು ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

error: Content is protected !!
Scroll to Top