ಕೊರೋನಾ ಅತಂಕದ ನಡುವೆ ವಿದ್ಯಾರ್ಥಿಗಳು ➤ ನಾಳೆಯಿಂದ SSLC ಅಗ್ನಿ ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.24:  ಕೊರೋನಾ ಭಯದ ನಡುವೆ SSLC ವಿದ್ಯಾರ್ಥಿಗಳಿಗೆ ಅಗ್ನಿ ಪರೀಕ್ಷೆ ಆತಂಕ ಶುರುವಾಗಿದೆ.ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡಿಕೆ ಸಾದ್ಯವಿಲ್ಲ ಅಂತ ಶಿಕ್ಷಣ ಇಲಾಖೆ ಹೇಳಿದೆ,ಜೊತೆಗೆ ಅಗತ್ಯ ಕ್ರಮಗಳನ್ನ ತಗೆದುಕೊಂಡು SSLC . ಪರೀಕ್ಷೆ ಸಿದ್ದತೆ ಕೂಡ ನಡೆದಿದೆ.ರಾಜ್ಯದಲ್ಲಿ ಕೊರೋನಾ ಹೆಮ್ಮಾರಿ ಆರ್ಭಟದ ನಡುವೆಯೂ ನಿಗದಿಯಂತೆ SSLC ಪರೀಕ್ಷೆ ಮಾಡಿಯೇ ತೀರಲು ಶಿಕ್ಷಣ ಇಲಾಖೆ ಪಣ ತೊಟ್ಟಿದೆ. ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ ಆರಂಭವಾಗಲಿದೆ. ಕೊರೋನಾ ಆತಂಕದ ನಡುವೆಯೇ 8.5 ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ 3 ಸಾವಿರ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

ಜೊತೆಗೆ ಪ್ರತಿ ದಿನ ಪರೀಕ್ಷೆ ಮುಗಿದ ಬಳಿಕ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಕಡಕ್ ಆಗಿ ಸೂಚಿಸಲಾಗಿದೆ. 3, 209 ಪರೀಕ್ಷಾ ಕೇಂದ್ರಗಳಲ್ಲಿ 5,755 ಆರೋಗ್ಯ ತಪಾಸಣೆ ಕೇಂದ್ರಗಳನ್ನ ತೆರೆಯಲಾಗಿದೆ. ಯಾವುದೇ ಕಾರಣಕ್ಕೂ ಎಸ್ ಎಸ ಎಲ್ ಸಿ. ಪರೀಕ್ಷೆ ಮುಂದೂಡಿಕೆ ಇಲ್ಲ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಸುರಕ್ಷಿತಾ ಕ್ರಮಗಳೊಂದಿದೆ ಪರೀಕ್ಷಾ ಸಿದ್ದತೆ ನಡೆದಿದ್ದು, SSLC ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Also Read  ಮೊದಲ ಎಲೆಕ್ಟ್ರಿಕ್​​​ ಬಸ್​'ಗೆ ಅಧಿಕೃತ ಚಾಲನೆ

 

ರಾಜ್ಯ ಸರ್ಕಾರದ ಕ್ರಮಗಳಂತೇ,

1. ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಲಾಗುವುದು.
2. ಪರೀಕ್ಷಾ ಕೇಂದ್ರಗಳಿಗೆ ಪ್ರತಿ ನಿತ್ಯ ಥರ್ಮಲ್ ಸ್ಕ್ಯಾನಿಂಗ್
3. ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗುವುದು.
4. ಪರೀಕ್ಷೆ ಮುಗಿದ ಬಳಿಕ ಪ್ರತಿ ಕೊಠಡಿ ಸ್ಯಾನಿಟೈಸ್
5. ಶೌಚಲಯ ಸುಚಿತ್ವ ಕಾಪಾಡಲು ಅಗತ್ಯ ಕ್ರಮ
6. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿ ನೇಮಕ
7. 1 ಕೊಠಡಿಯಲ್ಲಿ 18 ವಿದ್ಯಾರ್ಥಿಗಳನ್ನು ಕೂರಿಸುವ ವ್ಯವಸ್ಥೆ
8. ಪ್ರತಿ ವಿದ್ಯಾರ್ಥಿ ನಡುವೆ ಮೂರೂವರೆ ಅಡಿ ಅಂತರ
9. ಸಮಾಜಿಕ ಅಂತರ ಕಾಯ್ದುಕೊಳ್ಳಲು ಡೆಸ್ಕ್ ಗಳ ವ್ಯವಸ್ಥೆ
10. ಅನ್ಯ ಆರೋಗ್ಯ ಸಮಸ್ಯೆ ಇದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
11. ಕಂಟೈನ್ಮಂಟ್ ಝೋನ್ ನಲ್ಲಿ ಪರೀಕ್ಷಾ ಕೇಂದ್ರ ರದ್ದು,
12. ಇಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ
13. ರೆಗ್ಯುಲರ್ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ.

Also Read  ಪ.ಜಾ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

 

ಹೀಗೆ ಹಲವಾರು, ಸೂಕ್ತ ಕ್ರಮಗಳನ್ನ ಅಳವಡಿಸಿಕೊಂಡು SSLC ಪರೀಕ್ಷೆ ಯನ್ನ ನಡೆಸಲಾಗುತ್ತದೆ.

error: Content is protected !!
Scroll to Top